ಯುವ ಉತ್ಸಾಹಿ ಬಳಗ (ರಿ.) ಕೇಮಾರು ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇದರ ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನವು ನ.10 ರಂದು ಕೇಮಾರು ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಜರಗಿತು.
ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಶ್ರಮದ ಶ್ರೀ ಶ್ರೀ ಈಶವಿಠಲದಾಸ ಸ್ವಾಮೀಜಿಯವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ ಅಂಚೆ ಇಲಾಖೆಯು ನೀಡುತ್ತಿರುವ ಸೇವೆ ಹಾಗೂ ಕೇಂದ್ರ ರಾಜ್ಯ ಸರಕಾರದ ವಿವಿಧ ಸೇವೆಗಳನ್ನು ಗ್ರಾಮೀಣ ಪ್ರದೇಶದ ನಾಗರಿಕರಿಗೆ ಮುಟ್ಟುವಂತೆ ಮುತುವರ್ಜಿ ವಹಿಸಿರುವ ಯುವ ಉತ್ಸಾಹಿ ಬಳಗದ ಕಾರ್ಯಕ್ಕೆ ಶಾಘ್ಲನೆ ವ್ಯಕ್ತಪಡಿಸಿದರು.
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರ್ಕೆಟಿಂಗ್ ಪ್ರತಿನಿಧಿ ಗುರುಪ್ರಸಾದ್ ಮಾತನಾಡಿ ಅಂಚೆ ಇಲಾಖೆ ಸೇವೆಗಳ ಬಗ್ಗೆ ವಿವರಿಸಿ ಅತೀ ಕಡಿಮೆ ಮೊತ್ತದಲ್ಲಿ ದೊಡ್ಡ ಪ್ರಮಾಣದ ಅಪಘಾತ ವಿಮೆಯನ್ನು ನೊಂದಾಯಿಸುವಂತೆ ವಿನಂತಿಸಿದರು.
ಆಧಾರ್ ನೊಂದಾವಣೆ & ತಿದ್ದುಪಡಿ ಹಾಗೂ ಸಮಗ್ರ ರಕ್ಷಣಾ ಯೋಜನೆ (ಅಪಘಾತ ವಿಮೆ ₹ 549 / ₹749 ) ಸೇರಿದಂತೆ ಅಂಚೆ ಇಲಾಖೆಯ ಇನ್ನಿತರ ಸೇವೆಗಳನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾದ ಅಖಿಲ ಭಾರತ ತುಳು ಕೂಟದ ಪ್ರಧಾನಕಾರ್ಯದರ್ಶಿ ರೋಟರಿ ಕ್ಲಬ್ ಪ್ರತಿನಿಧಿ ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಕೇಮಾರು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ರೇಣುಕಾ ಅಮೀನ್, ದೈವಾರಾಧಕರಾದ ಅನಂದ ಪೂಜಾರಿ, ಯುವ ಉತ್ಸಾಹಿ ಬಳಗದ ಅಧ್ಯಕ್ಷರಾದ ಚಂದ್ರಹಾಸ ಜೈನ್ ಹಕ್ಕೇರಿ, ಹಾಗೂ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಸುಕೇಶ್ ಕೋಟ್ಯಾನ್ ಕಾಂತಾವರ ಕಾರ್ಯಕ್ರಮ ನೀರೂಪಿಸಿ ಧನ್ಯವಾದವಿತ್ತರು.