Monday, January 13, 2025
HomeUncategorizedಭದ್ರಗಿರಿಯಲ್ಲಿ  ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನಾ ಮಹೋತ್ಸವ 

ಭದ್ರಗಿರಿಯಲ್ಲಿ  ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪುಣ್ಯತಿಥಿ ಆರಾಧನಾ ಮಹೋತ್ಸವ 

ಶ್ರೀ ಕಾಶೀ ಮಠಾಧೀಶ  ಪರಮಪೂಜ್ಯ ಶ್ರೀಮದ್ ಸುಧೀಂದ್ರ ಸ್ವಾಮಿಜಿಯವರ 9 ನೇ ಪುಣ್ಯತಿಥಿ ಆರಾಧನೆಯನ್ನು  ಮಂಗಳವಾರ ತಾರೀಕು 7  ಜನವರಿಯಂದು ದಕ್ಷಿಣ ಪಂಡರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ಆಚರಿಸಲಾಯಿತು. ಈ ಶುಭ  ಸಂದರ್ಭದಲ್ಲಿ  ಭಜನೆ ಹಾಗೂ ದೇವಸ್ಥಾನದ ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ  ಕಾಶಿನಾಥ  ಭಟ್     

ಮತ್ತು ಸಿಂಧು ಕಾಮತ್ ಇವರಿಂದ ಗುರುಗುಣಗಾನ ಮತ್ತು ಪ್ರಭಾಕರ ಭಟ್ ಇವರಿಂದ  ಗುರುಸ್ತವನ  ನಡೆಯಿತು. ಮಹಾಪೂಜೆಯ ನಂತರ  ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. 

ಆಡಳಿತ ಮೊಕ್ತೇಸರರಾದ  ಭದ್ರಗಿರಿ ಪಾಂಡುರಂಗ ಆಚಾರ್ಯ , ಅರ್ಚಕರಾದ ಸದಾನಂದ ಆಚಾರ್ಯ,  ಸೇವಾದಾರರಾದ CA ಗಣೇಶ್ ಕಾಮತ್ ಮತ್ತು ಕುಟುಂಬಸ್ಥರು, ತೋನ್ಸೆ ಗೋಕುಲದಾಸ ಪೈ ,ತೋನ್ಸೆ ಅಜಿತ್ ಪೈ, ಗೌರವಾಧ್ಯಕ್ಷ ಎನ್ ಮಂಜುನಾಥ ನಾಯಕ್ ,ವಿಶ್ವಸ್ತ ಮಂಡಳಿಯ ಸದಸ್ಯರಾದ ಗಣೇಶ ಪೈ,  ಗಿರಿಧರ ರಾವ್,  ಸುರೇಶ ಶೆಣೈ‌ ,ಭಾಸ್ಕರ ಶೆಣೈ , ಭದ್ರಗಿರಿ ರಘುವೀರ ಆಚಾರ್ಯ, ಮತ್ತಿತರ ಭಕ್ತಾದಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular