ಧರ್ಮಶ್ರೀ ರಿಲೀಫ್ ಫೌಂಡೇಶನ್ ಮಹಾರಾಷ್ಟ್ರ ಹಾಗೂ ಕರ್ನಾಟಕ ವತಿಯಿಂದ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ 144 ವರ್ಷದ ನಂತರ ಬಂದಿರುವ ಮಹಾ ಕುಂಭಮೇಳದಲ್ಲಿ ರಾತ್ರಿ ಸಮಯದಲ್ಲಿ ಮೈಕೋರೆಯುವ ಚಳಿ ಇದ್ದು ಸಾಧು ಸಂತರು ಇರುವ ಬೇರೆ ಬೇರೆ ಅಖಾಡಕ್ಕೆ ತೆರಳಿ ನೂರಾರು ಸಾಧುಸಂತರಿಗೆ ಕಂಬಳಿ ಮತ್ತು ಅವಶ್ಯಕತೆ ವಸ್ತುವನ್ನು ನೀಡಿ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ನಾಗರಾಜ್ ಸುವರ್ಣ ಹಾಗೂ ಅವರ ಧರ್ಮಪತ್ನಿ ನಿರ್ಮಲಾ ಸುವರ್ಣ ಹಾಗೂ ಸದಸ್ಯರಾಗಿರುವ ಮಹೇಶ್ ಬನಿಯಾ ಮತ್ತು ನೀಲಂ ಬನಿಯಾ ಉಪಸ್ಥಿತರಿದ್ದರು.