Tuesday, January 14, 2025
HomeUncategorizedಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವ ಸಂಭ್ರಮಕ್ಕೆ ಏರ್ಯ ಲಕ್ಷ್ಮೀನಾರಾಯಣ ಆಳ್ವ ರಂಗ ಮಂದಿರ ಸಜ್ಜು

ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವ ಸಂಭ್ರಮಕ್ಕೆ ಏರ್ಯ ಲಕ್ಷ್ಮೀನಾರಾಯಣ ಆಳ್ವ ರಂಗ ಮಂದಿರ ಸಜ್ಜು

ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ದೀಪಿಕಾ ಪ್ರೌಢಶಾಲೆಯಲ್ಲಿ ವಜ್ರ ಮಹೋತ್ಸವ ಸಂಭ್ರಮಕ್ಕೆ ಏರ್ಯ ಲಕ್ಷ್ಮೀನಾರಾಯಣ ಆಳ್ವ ರಂಗ ಮಂದಿರ ಸಜ್ಜುಗೊಂಡಿದೆ. ಮೊಡಂಕಾಪು: ದೀಪಿಕಾ ಪ್ರೌಢಶಾಲೆ ನಾಳೆಯಿಂದ ವಜ್ರ ಮಹೋತ್ಸವ ಸಂಭ್ರಮ ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಮೊಡಂಕಾಪು ಎಂಬಲ್ಲಿ ಕಳೆದ 1964 ರಲ್ಲಿ ಆರಂಭಗೊಂಡ ದೀಪಿಕಾ ಪ್ರೌಢಶಾಲೆಯಲ್ಲಿ ಡಿ. 14ರಿಂದ 15ರತನಕ ಶಾಲಾ ವಾಷರ್ಿಕೋತ್ಸವ ಮತ್ತು ವಜ್ರ ಮಹೋತ್ಸವವು ಸಂಭ್ರಮ ಸಡಗರದಿಂದ ನಡೆಯಲಿದೆ. 14ರಂದು ಬೆಳಿಗ್ಗೆ 9 ಗಂಟೆಗೆ ಹಿರಿಯ ವಿದ್ಯಾಥರ್ಿ ಜೇಸನ್ ಸಂತೋಷ್ ಮೊಂತೆರೋ ಧ್ವಜಾರೋಹಣ ನೆರವೇರಿಸುವ ಮೂಲಕ ಶಾಲಾ ವಾಷರ್ಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಾಲಾ ಸಂಚಾಲಕ ಧರ್ಮಗುರು ವಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ವಿಶ್ರಾಂತ ವಿದ್ಯಾಂಗ ಉಪ ನಿದರ್ೇಶಕ ವಾಲ್ಟರ್ ಡಿಮೆಲ್ಲೊ, ದೇಹದಾಢ್ರ್ಯ ಪಟು ರೇಮಂಡ್ ಡಿಸೋಜ, ವಿದ್ವಾಂಸ ಮೌಲಾನ ಅಬ್ದುಲ್ ಅಝೀಝ್ ದಾರಿಮಿ, ಮಕ್ಕಳತಜ್ಞ ಡಾ.ಮಹೇಶ ಭಟ್, ವಕೀಲ ಅಶ್ವನಿ ಕುಮಾರ್ ರೈ, ಹಳೆವಿದ್ಯಾಥರ್ಿ ಸಂಘದ ಅಧ್ಯಕ್ಷ ರಾಜೇಶ ಸಾಲ್ಯಾನ್ ಮತ್ತಿತರ ಗಣ್ಯರು ಭಾಗವಹಿಸುವರು. ಇದೇ ವೇಳೆ ವಿದ್ಯಾಥರ್ಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 15ರಂದು ಸಂಜೆ 5 ಗಂಟೆಗೆ ಬೆಂಗಳೂರು ಚಾಟರ್ೆಡ್ ಹೌಸಿಂಗ್ ಚೇರ್ಮನ್ ಏರ್ಯ ಬಾಲಕೃಷ್ಣ ಹೆಗ್ಡೆ ಇವರು ವಜ್ರ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ರಾಕೇಶ ಮಲ್ಲಿ, ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ.ರಮಾನಾಥ ರೈ, ವಿಶ್ರಾಂತ ಮುಖ್ಯಶಿಕ್ಷಕ ಮಹಾಬಲೇಶ್ವರ ಹೆಬ್ಬಾರ್, ಕಂಕನಾಡಿ ಫಾದರ್ ಮುಲ್ಲಸ್ರ್ ಆಸ್ಪತ್ರೆ ನಿದರ್ೇಶಕ ಪಾವುಸ್ತಿನ್ ಲೋಬೋ, ಶಾಲಾ ಸಂಚಾಲಕ ಧರ್ಮಗುರು ವಲೇರಿಯನ್ ಡಿಸೋಜ ಮತ್ತಿತರ ಗಣ್ಯರು ಭಾಗವಹಿಸುವರು. ಅಂದು ಸಂಜೆ 7 ಗಂಟೆಗೆ ಉಜಿರೆ ವಿದ್ಯಾಥರ್ಿಗಳಿಂದ ‘ಎಸ್ ಡಿ ಎಂ ಕಲಾ ವೈಭವ’, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದಶ್ನಗೊಳ್ಳಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಡಾ.ಗೋವರ್ಧನ್ ರಾವ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular