ಪಡುಬಿದ್ರಿ: ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಗ್ರಾಮಸ್ಥರು, ಭಕ್ತರು ಹಾಗೂ ದಾನಿಗಳ ನೆರವಿನಿಂದ ಜೀರ್ಣೋದ್ಧಾರಗೊಂಡು ಅದ್ಭುತವಾಗಿ ಮೂಡಿ ಬಂದಿದೆ.
ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ದೇವಿಯ ವಾರ್ಷಿಕ ಉತ್ಸವದ ಸಂದರ್ಭ, ಕರಂದಾಡಿ ಹೊಳೆಯಲ್ಲಿ ಜಳಕ ಮಾಡಿ ಕರಂದಾಡಿ ಶ್ರೀ ವಿಷ್ಣುಮೂರ್ತಿ ಮತ್ತು ಬ್ರಹ್ಮಲಿಂಗೇಶ್ವರ ದೇವರ ಭೇಟಿ ಮಾಡಿ, ಕಟ್ಟೆ ಪೂಜಾದಿಗಳನ್ನು ನೆರವೇರಿಸಿಕೊಳ್ಳುವ ಪುಣ್ಯ ಕ್ಷೇತ್ರ. ಗ್ರಾಮದ ರಾಜನ್ ದೈವ ಮಜೂರು ಜುಮಾದಿಯ ಗಡುವಾಡು ನೇಮೋತ್ಸವದ ಪಾವನ ಕ್ಷೇತ್ರ ಕರಂದಾಡಿ ದೇವಳದ ದೇವರ ಮೂರ್ತಿ ಸುಮಾರು 14ನೇ ಶತಮಾನದ್ದು ಎಂದು ದಿ.ಪಾದೂರು ಗುರುರಾಜ ಭಟ್ಟರು ತುಳು ಇತಿಹಾಸ ಆಕರ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
11 ತಿಂಗಳ ಹಿಂದೆ ಶಿಲಾನ್ಯಾಸ: ದೇವಾಲಯ ಜೀರ್ರೋದ್ದಾರಕ್ಕಾಗಿ ಹಾರ್ಯಯೋಜನೆ ಸಿದ್ಧಪಡಿಸಿ 11ತಿಂಗಳ ಶಿಲಾನ್ಯಾಸ ದೆರವೇರಿಸಲಾಗಿತ್ತು. 4.5ಕೋಟಿ ರೂ.ವೆಚ್ಚದಲ್ಲಿ ಪುನಃ ನಿರ್ಮಾಣಗೊಂಡ
30 ಸೆನ್ಸ್ ಜಾಗದಲ್ಲಿ ಸೌತೆ, ಕುಂಬಳ ದೇವಳ ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರಮದಾನದಲ್ಲಿ
ಉತ್ಸಾಹದಿಂದ ಪಾಲ್ಗೊಂಡಿರುವುದಲ್ಲದೆ, ಬ್ರಹ್ಮಕಲಶೋತ್ಸವಕ್ಕಾಗಿ ಶ್ರಮದಾನದ ಮೂಲಕ 30ಸೆಂಟ್ಸ್ ಜಾಗದಲ್ಲಿ ಸೌತೆ, ಕುಂಬಳ, ಗುಳ್ಳ ಬೆಳೆದಿರುವುದು ಗಮನಾರ್ಹ ದೇವಸ್ಥಾನದಲ್ಲಿ ನವೀಕೃತ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ಸುತ್ತುಪೌಳಿ, ಪಾಕಶಾಲೆ ಸಮರ್ಪಣೆ ಹಾಗೂ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.30ರಿಂದ ಫೆ.9ರವರೆಗೆ ನಡೆಯಲಿದೆ.
ದೇವಳದ ಪ್ರಧಾನ ತಂತ್ರಿ ಕಳತ್ತೂರು ಉದಯ ನೇತೃತ್ವದಲ್ಲಿ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಮಂಜಿತ್ತಾಯ ಸಹಭಾಗಿತ್ವದಲ್ಲಿ ಪುನಃ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ನೆರವೇರಲಿದೆ. ದೇವರ ಬಿಂಬ ಪುನಃ ಪ್ರತಿಷ್ಠಾಪನೆ: 30ರಿಂದ 9ರವರೆಗೆ ವಿವಿಧ ವೈಧಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ನೆರವೇರಲಿದ್ದು, 1 ರಂದು ಸಂಜೆ 5 ರಿಂದಹಸಿರು ಹೊರೆಕಾಣಿಕೆ ಮೆರವಣಿಗೆ. ರಾತ್ರಿ 7ರಿಂದ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕೃಪಾಶ್ರಿತ ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಕರಂದಾಡಿ ಮಜೂರು ಅವರಿಂದ ಶ್ರೀರಾಮ ದರ್ಶನ ಯಕ್ಷಗಾನ, 3ರಂದು ಬೆಳಗ್ಗೆ 8.20 ಕ್ಕೆ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವರ ಬಿಂಬ ಪುನಃ ಪ್ರತಿಷ್ಠಾಪನೆ ಪ್ರತಿಜ್ಞಾ ವಿಧಿ, ಮಹಾಪೂಜೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ ಸಂಜೆ 5 ರಿಂದ ಬಲಿ ಶಿಲಾ ಪ್ರತಿಷ್ಠಾಪನೆ, ಮಹಾಬಲಿ ಪೀಠ ಪ್ರತಿಷ್ಠಾಪನೆ, ಕ್ಷೇತ್ರಪಾಲ ಪ್ರತಿಷ್ಠಾಪನೆ, ಕಲಶ ಮಂಟಪ ಸಂಸ್ಕಾರ. 6ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ದಾನಿಗಳನ್ನು ಸನ್ಮಾನಿಸಲಾಗುವುದು. ಸಂಜೆ 7ರಿಂದ ವೈವಿಧ್ಯಮಯ ಕಾರ್ಯಕ್ರಮ ಹಾಗೂ ಸಂಗೀತ ರಸಮಂಜರಿ ನಡೆಯಲಿದೆ.
6ಕ್ಕೆ ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ 5ರಂದು ಬೆಳಗ್ಗೆ ತತ್ವಹೋಮ, ಶಾಂತಿ ಪ್ರಾಯಶ್ಚಿತ ಹೋಮ ಮೃತ್ಯುಂಜಯ ಹೋಮ. ಸಂಜೆ 4ರಿಂದ ಕಲಶಾಧಿವಾಸ, ಅಧಿವಾಸ ಹೋಮಗಳು. ಸಂಜೆ 7ರಿಂದ ಪೆರ್ಡೂರು ಮೇಳದಿಂದ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಪ್ರದರ್ಶನವಿದೆ. 6ರಂದು ಬೆಳಗ್ಗೆ 9.20ಕ್ಕೆ ಮೀನ ಲಗ್ನ ಸುಮುಹೂರ್ತದಲ್ಲಿ ಸಹಸ್ರ ಪರಿ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಅವಸ್ಥುತ ಬಲಿ, ಪ್ರಸನ್ನ ಪೂಜೆ, ಪಲ್ಲ ಪೂಜೆ, ಮಹಾಮಂತ್ರಾಕ್ಷತೆ, ಸಂಜೆ 7ರಿಂದ ದುರ್ಗಾನಮಸ್ಕಾರ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ದಾನಿಗಳ ಸನ್ಮಾನ ನೆರವೇರಲಿದೆ ̤