Tuesday, January 14, 2025
HomeSportಕ್ರೀಡೆಸಸಿಹಿತ್ಲು : ಜಿಲ್ಲಾ ಮಟ್ಟದ ಯುವಜನೋತ್ಸವ 2024-25

ಸಸಿಹಿತ್ಲು : ಜಿಲ್ಲಾ ಮಟ್ಟದ ಯುವಜನೋತ್ಸವ 2024-25

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,MY BHARATH, ನೆಹರೂ ಯುವ ಕೇಂದ್ರ ಮಂಗಳೂರು,ದ.ಕ ಜಿಲ್ಲಾ ಯುವಜನ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ಗ್ರಾಮ ಪಂಚಾಯತ್ ಹಳೆಯಂಗಡಿ, ಸಸಿಹಿತ್ಲು ಯುವಕ -ಯುವತಿ ಮಂಡಲ ರಿ.ನವೋದಯ ಮಹಿಳಾ ಮಂಡಲ ಸಸಿಹಿತ್ಲು (ಸಂಚಾಲಕರು -ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘ ರಿ.ಸಸಿಹಿತ್ಲು ಮತ್ತು ಮುಂಬೈ)ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ 2024-25 ತಾ.01.12.24ಆದಿತ್ಯವಾರ, ಸ್ಥಳ -ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಮಾನ್ಯ ಶಾಸಕರಾದ ಉಮಾನಾಥ.ಎ.ಕೋಟ್ಯಾನ್ ಇವರು ದೀಪಪ್ರಜ್ವಲನೆ ಹಾಗೂ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.

ಪೂರ್ಣಿಮಾ ಅಧ್ಯಕ್ಷರು, ಹಳೆಯಂಗಡಿ ಗ್ರಾಮ ಪಂಚಾಯತ್, ಪ್ರದೀಪ್ ಡಿಸೋಜ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಜಗದೀಶ್ ಆಡಳಿತ ಅಧಿಕಾರಿ ನೆಹರೂ ಯುವ ಕೇಂದ್ರ ಮಂಗಳೂರು ಸೇಸೆಮಣೆ ನೆಹರೂ ಯುವ ಕೇಂದ್ರ, ಸುರೇಶ್ ರೈ ಸೊಡಿಮುಳ್ಳು ಅಧ್ಯಕ್ಷರು,ದ.ಕ ಜಿಲ್ಲಾ ಯುವಜನ ಒಕ್ಕೂಟ, ಸುಧಾಕರ ಅಮೀನ್ ಅಧ್ಯಕ್ಷರು, ತಾಲೂಕು ಯುವಜನ ಒಕ್ಕೂಟ, ಶಿವಪ್ರಸಾದ್ ಮೈಲೇರಿ ಅಧ್ಯಕ್ಷರು ಕಡಬ ಯುವಜನ ಒಕ್ಕೂಟ, ದಿಲೀಪ್ ಅಧ್ಯಕ್ಷರು, ಸಸಿಹಿತ್ಲು ಯುವಕ ಮಂಡಲ ರಿ. ಬಬಿತಾ ಮೋಹನ್ ಅಧ್ಯಕ್ಷರು, ಸಸಿಹಿತ್ಲು ಯುವತಿ ಮಂಡಲ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಪ್ರದೀಪ್ ಡಿಸೋಜ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದಿಲೀಪ್ ಅಧ್ಯಕ್ಷರು, ಸಸಿಹಿತ್ಲು ಯುವಕ ಮಂಡಲ ರಿ. ಅಮಿತ್ ಕುಮಾರ್ ಉಪಾಧ್ಯಕ್ಷರು , ಸಸಿಹಿತ್ಲು ಯುವಕ ಮಂಡಲ, ಸತೀಶ್ ತಿಂಗಳಾಯ, ಉಪಾಧ್ಯಕ್ಷರು, ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘ ರಿ.
ಅಲೋಶಿಯಸ್ ಲೊಸೈಲ್ ಡಿಸೋಜ ಪಂಜಿಮೊಗರು, ಕ್ಲೊಟಿಲ್ಡ ಲೋಬೋ ಮುಖ್ಯೋಪಾಧ್ಯಾಯಿನಿ,ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸಸಿಹಿತ್ಲು ಬಬಿತಾ ಮೋಹನ್ ಅಧ್ಯಕ್ಷರು ಸಸಿಹಿತ್ಲು ಯುವತಿ ಮಂಡಲ, ಶ ಜಗದೀಶ್ ಆಡಳಿತ ಅಧಿಕಾರಿ ನೆಹರೂ ಯುವ ಕೇಂದ್ರ ಮಂಗಳೂರು,ವಿ.ಕೆ ಯಾದವ್, ಶ್ರೀ ಶರತ್ ಕುಮಾರ್ ಉಪಸ್ಥಿತರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿಸೋಜ ಅತಿಥಿಗಳನ್ನು ಸ್ವಾಗತಿಸಿದರು, ಸಸಿಹಿತ್ಲು ಯುವಕ ಮಂಡಲ ಅಧ್ಯಕ್ಷರಾದ ಶ್ರೀ ದಿಲೀಪ್ ವಂದನಾರ್ಪಣೆ ಗೈದರು.ವಿ.ಕೆ ಯಾದವ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು,ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು,ಗ್ರಾಮಸ್ಥರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular