ಇಳಂತಿಲ ವಾಣಿನಗರದ ಶ್ರೀ ಕೇಶವ ಶಿಶು ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಪೂಜ್ಯ ಡಾ! ಡಿ. ವೀರೇಂದ್ರ ಹೆಗ್ಗಡೆಯವರು ರೂ.1 ಲಕ್ಷ ಅನುದಾನ ಮಂಜೂರಾತಿ ನೀಡಿದ್ದು ಮಂಜೂರಾತಿ ಪತ್ರ ವಿತರಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ). ಗುರುವಾಯನಕೆರೆಯ ಯೋಜನಾಧಿಕಾರಿಯವರಾದ ದಯಾನಂದ ಪೂಜಾರಿಯವರು ಸಮಿತಿಯ ಪದಾಧಿಕಾರಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ ಅಣ್ಣಾಜೆ, ಕಾರ್ಯದರ್ಶಿ ರವಿ ಇಳಂತಿಲ, ಸಮಿತಿಯ ಮಾಜಿ ಅಧ್ಯಕ್ಷರಾದ ಶಂಕರ ಭಟ್ ನಿಡ್ಡಾಜೆ ಇಳಂತಿಲ ಒಕ್ಕೂಟದ ಅಧ್ಯಕ್ಷರಾದ ಮೋಹನ ಶೆಟ್ಟಿ, ಕಣಿಯೂರು ವಲಯ ಮೇಲ್ವಿಚಾರಕ ಶಿವಾನಂದ. ಕೆ ಸೇವಾಪ್ರತಿನಿಧಿ ವಸಂತಿ ಹಾಗೂ ಸಮಿತಿಯ ಸದಸ್ಯರು, ಶಿಶು ಮಂದಿರದ ಪುಟಾಣಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು
ಇಳಂತಿಲ :ಶ್ರೀ ಕೇಶವ ಶಿಶು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ನೆರವು
RELATED ARTICLES