– ವಿಶಾಲ್ ಸುಭರ್‌ವಾಲ್, ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಗ್ರೂಪ್ ಹೆಡ್, ಸ್ಟ್ರಾಟೆಜಿ, ಡಿಸ್ಟ್ರಿಬ್ಯೂಷನ್, ಪ್ಲಾನಿಂಗ್, ಇ-ಕಾಮರ್ಸ್, ಹೆಚ್ ಡಿ ಎಫ್ ಸಿ ಲೈಫ್
- ನಿಮ್ಮ ಹ್ಯೂಮನ್ ಲೈಫ್ ವ್ಯಾಲ್ಯೂ (ಹೆಚ್ ಎಲ್ ವಿ) ತಿಳಿದುಕೊಂಡು ಅದಕ್ಕೆ ತಕ್ಕಂತೆ ಜೀವ ವಿಮೆಯನ್ನು ಖರೀದಿಸಿ.
- ನಿಮ್ಮ ಬದುಕಿನ ಹಂತ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಜೀವನದ ಗುರಿಗಳಿಗೆ ಅನುಗುಣವಾಗಿ ಜೀವ ವಿಮೆ ಉತ್ಪನ್ನಗಳನ್ನು ಆಯ್ಕೆ ಮಾಡಿ.
- ನಿಮ್ಮ ಗುರಿಗೆ ತಕ್ಕಂತೆ ಪಾಲಿಸಿಯ ಅವಧಿ ಮತ್ತು ಪ್ರೀಮಿಯಂ ಮೊತ್ತವನ್ನು ನಿರ್ಧರಿಸಿ.
- ಅತ್ಯಂತ ಕಡಿಮೆ ಬೆಲೆಯ ಯೋಜನೆ ನಿಮಗೆ ಸೂಕ್ತ ಆಗಿರಲಿಕ್ಕಿಲ್ಲ ಎಂಬುದನ್ನು ಗಮನದಲ್ಲಿಡಿ.
- ಪಾಲಿಸಿಯ ವೈಶಿಷ್ಟ್ಯಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಸಹ ಪರಿಶೀಲಿಸಿ.
- ಉತ್ತಮ ಪ್ರಯೋಜನ ಮತ್ತು ರಿಸ್ಕ್ ಕವರ್ ಒದಗಿಸುವ ಆಡ್- ಆನ್ ರೈಡರ್ ಗಳನ್ನು ಖರೀದಿಸಿ.
- ಅರ್ಜಿ ಫಾರ್ಮ್ ಅನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಮತ್ತು ಪೂರ್ಣ ವಿವರಗಳನ್ನು ತಿಳಿಸಿ.
- ನಿಮ್ಮ ಪಾಲಿಸಿಗೆ ನಾಮಿನಿಯನ್ನು ನೇಮಿಸಿ ಮತ್ತು ಅವರು ಅದರ ಬಗ್ಗೆ ತಿಳಿದಿರುವಂತೆ ನೋಡಿಕೊಳ್ಳಿ.
- ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇ-ವಿಮೆ ಖಾತೆಯಲ್ಲಿ (ಇಐಎ) ಸೇವ್ ಮಾಡಿ.
- ವಿಮೆ ಪಾಲಿಸಿಗಳು 30 ದಿನಗಳ ಫ್ರೀಲುಕ್ ಆಫರ್‌ನೊಂದಿಗೆ ಬರುತ್ತವೆ, ಇದು ಒಂದು ವಿಶಿಷ್ಟ ಆಫರ್ ಆಗಿದೆ.