Wednesday, October 9, 2024
Homeಅಂತಾರಾಷ್ಟ್ರೀಯಈ ದೇಶದಲ್ಲಿ ಭಾರತ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! | ಯಾಕೀ...

ಈ ದೇಶದಲ್ಲಿ ಭಾರತ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಮುಂದಾದ ಸರ್ಕಾರ! | ಯಾಕೀ ನಿರ್ಧಾರ?

ನವದೆಹಲಿ: ಭಾರತದಲ್ಲಿ ಕಾಗೆಗೆ ಭಾರೀ ಮಹತ್ವವಿದೆ. ಕಾಗೆಯನ್ನು ಶನಿದೇವರ ವಾಹನ ಎಂದು ಪರಿಗಣಿಸಲಾಗುತ್ತದೆ. ಪುಣ್ಯತಿಥಿ ಕಾರ್ಯಗಳಲ್ಲಿ ಹಿರಿಯರಿಗೆ ಎಡೆ ಬಡಿಸಲು ಕಾಗೆಗಳು ಅತ್ಯಂತ ಮಹತ್ವಪೂರ್ಣವಾದುದು. ಆದರೆ ಇಲ್ಲೊಂದು ದೇಶದಲ್ಲಿ ಭಾರತ ಮೂಲದ ಕಾಗೆಗಳು ಸಮಸ್ಯಾತ್ಮಕವಾಗಿವೆಯಂತೆ. ಹೀಗಾಗಿ ಸುಮಾರು 10 ಲಕ್ಷ ಭಾರತ ಮೂಲದ ಕಾಗೆಗಳನ್ನು ಕೊಲ್ಲಲು ಆ ದೇಶ ನಿರ್ಧರಿಸಿದೆ.
ಕೀನ್ಯಾದಲ್ಲಿ ಭಾರತ ಮೂಲದ ಕಾಗೆಗಳು ಭಾರೀ ಸಮಸ್ಯೆಯನ್ನು ಸೃಷ್ಟಿಸಿವೆ. ಹೀಗಾಗಿ ಅಲ್ಲಿನ ಮೋಂಬಾಸಾದಲ್ಲಿ ಈ ಕಾಗೆಗಳನ್ನು ನಿರ್ಮೂಲನ ಮಾಡಲು ವನ್ಯಜೀವಿ ಸಂಘ ಮುಂದಾಗಿದೆ. ಕೀನ್ಯಾದ ಕರಾವಳಿ ತೀರದಲ್ಲಿ ಪ್ರವಾಸೋದ್ಯಮಕ್ಕೆ ಕಾಗೆಗಳು ಭಾರೀ ಕಂಟಕವಾಗಿವೆ. ಇಲ್ಲಿನ ಅನೇಕ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಆದಾಯದ ಮೂಲ. ಆದರೆ ಕಾಗೆಗಳ ಸಂಖ್ಯೆ ಏರಿಕೆಯಿಂದ ಇಲ್ಲಿ ಅವು ಪ್ರವಾಸಿಗರಿಗೆ ಭಾರೀ ಕಿರಿಕಿರಿಯನ್ನುಂಟು ಮಾಡಿವೆ. ಹೋಟೆಲ್‌ ಬಳಿ ಬಂದು ಆಹಾರ ತಿನ್ನುವುದು, ಟೇಬಲ್‌ ಮೇಲೆ ಹಿಕ್ಕೆ ಹಾಕುವುದರಿಂದ ಪ್ರವಾಸಿಗರು ಮತ್ತು ಗ್ರಾಹಕರು ಇಲ್ಲಿನ ಹೊಟೆಲ್‌ಗಳ ಬಗ್ಗೆ ನೆಗೆಟಿವ್‌ ವಿಮರ್ಶೆ ಮಾಡುತ್ತಿದ್ದಾರೆ. ಇದು ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದೆ. ಹೀಗಾಗಿ ಇವುಗಳನ್ನು ಕೊಲ್ಲಲು ಆ ದೇಶ ಮುಂದಾಗಿದೆ.
ಅದಕ್ಕಾಗಿ ಕೀನ್ಯಾ ದೇಶ ನ್ಯೂಜಿಲೆಂಡ್‌ನಿಂದ ದುಬಾರಿ ವಿಷ ಆಮದು ಮಾಡಿಕೊಳ್ಳಲು ಮುಂದಾಗಿದೆ. ಕೆಜಿಗೆ 5 ಲಕ್ಷ ರೂ. ವಿಷವನ್ನು ಆಮದು ಮಾಡಿಕೊಳ್ಳಲುದ್ದೇಶಿಸಿದ್ದು, ಇಷ್ಟೊಂದು ಕಾಗೆಗಳ ಕೊಲ್ಲುವುದಕ್ಕೆ 5 ಕೆಜಿ ವಿಷ ಬಳಸಲು ಚಿಂತಿಸಲಾಗಿದೆ.
ಕಾಗೆಗಳಿಗೆ ಅವು ಸೇವಿಸುವ ಮಾಂಸದೊಳಗೆ ವಿಷ ಸೇರಿಸಿ ಕೊಲ್ಲಲು ನಿರ್ಧರಿಸಲಾಗಿದೆ.
ಭಾರತದ ಕಾಗೆಗಳು ಕೀನ್ಯಾಕ್ಕೆ ಹೇಗೆ ತಲುಪಿದವು ಎಂಬುದಕ್ಕೆ ಹಲವು ಕತೆಗಳಿವೆ. ಬ್ರಿಟಿಷ್‌ ಗವರ್ನರ್‌ ಒಬ್ಬರು ಭಾರತದಲ್ಲಿ ಕಾಗೆಗಳು ಕಸವನ್ನು ತಿಂದು ಸ್ವಚ್ಛ ಮಾಡುವುದನ್ನು ಗಮನಿಸಿದ್ದರು. ಅದರಂತೆ ಆಫ್ರಿಕಾದಲ್ಲೂ ಕಸ ತಿಂದು ಸ್ವಚ್ಛಗೊಳಿಸಬಹುದು ಎಂದು ಅವರು ಅವುಗಳನ್ನು ಅಲ್ಲಿ ಪರಿಚಿಯಿಸಿದರು ಎನ್ನಲಾಗಿದೆ. ಹಡಗಿನಲ್ಲಿ ಕುಳಿತು ಪ್ರಯಾಣಿಸಿದವು ಎಂದೂ ಹೇಳಲಾಗುತ್ತದೆ.

RELATED ARTICLES
- Advertisment -
Google search engine

Most Popular