Thursday, November 7, 2024
Homeತುಳುನಾಡುಜೈನ ಕಾಶಿ ಮೂಡುಬಿದಿರೆಗೆ 108 ಪೂರಣ ಸಾಗರ್ ಮುನಿ ಆಗಮನ

ಜೈನ ಕಾಶಿ ಮೂಡುಬಿದಿರೆಗೆ 108 ಪೂರಣ ಸಾಗರ್ ಮುನಿ ಆಗಮನ

ಜೈನ ಕಾಶಿ ಮೂಡುಬಿದಿರೆಗೆ 108 ಪೂರಣ ಸಾಗರ್ ಮುನಿ ಇಂದು ಕಾರ್ಕಳದಿಂದ ಆಗಮಿಸಿ ಪುರ ಪ್ರವೇಶ ಮಾಡಿದರು. ನಿನ್ನೆ 108 ಕುಂಥು ಸಾಗರ ಮುನಿ ಮಹಾರಾಜ್ ಪುರ ಪ್ರವೇಶ ಮಾಡಿದ್ದು, ಇಬ್ಬರು ದಿಗಂಬರ ಸಾಧುಗಳು ರಾಷ್ಟ್ರ ಸಂತ ಆಚಾರ್ಯ ವಿದ್ಯಾ ಸಾಗರ ಶಿಷ್ಯರಾಗಿದ್ದು ಕುಂಥು ಸಾಗರ ಮುನಿರಾಜ್ ಜೈನ ಕಾಶಿಯಲ್ಲಿ ನಾಲ್ಕು ದಿನ ಮೊಕ್ಕಾo ಇರುವರು. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ನೇತೃತ್ವದಲ್ಲಿ ಗುರುಗಳ ಪಾದ ಪೂಜೆ ನೆರವೇರಿಸಿ ಸಿದ್ದಾoಥ ದರ್ಶನ, ರತ್ನ ಬಿಂಬ ದರ್ಶನ 18 ಬಸದಿ ದರ್ಶನ ನೆರವೇರಿತು.
ಕಾರ್ಕಳದಿಂದ ಮುನಿ ವಿಹಾರ ಜತೆಗೆ ಸನತ್ ಕುಮಾರ್, ರಾಕೇಶ್ ಜೈನ್, ಮಹಾಲಕ್ಷ್ಮಿ, ರೋಹಿಣಿ, ಸುರಕ್ಷಾ ಮೊದಲಾದವರು ಜೊತೆಗಿದ್ದರು ಸಂಜೆ ಗುರುಗಳ ಆರತಿ, ಸ್ವಾಧ್ಯಯ ಕಾರ್ಯಕ್ರಮ ಶ್ರೀ ಮಠದಲ್ಲಿ ಆಯೋಜನೆ ಗೊಂಡಿದೆ.

RELATED ARTICLES
- Advertisment -
Google search engine

Most Popular