Friday, February 14, 2025
Homeಮಂಗಳೂರುಪೊರ್ಕೋಡಿ ರಥ ಸಪ್ತಮಿ ಪ್ರಯುಕ್ತ 108 ಸೂರ್ಯನಮಸ್ಕಾರ ಹಾಗೂ ಅಖಂಡ ಸೂರ್ಯನಮಸ್ಕಾರ ಕಾರ್ಯಕ್ರಮ

ಪೊರ್ಕೋಡಿ ರಥ ಸಪ್ತಮಿ ಪ್ರಯುಕ್ತ 108 ಸೂರ್ಯನಮಸ್ಕಾರ ಹಾಗೂ ಅಖಂಡ ಸೂರ್ಯನಮಸ್ಕಾರ ಕಾರ್ಯಕ್ರಮ

ಮಂಗಳೂರು : ರಥ ಸಪ್ತಮಿ ಪ್ರಯುಕ್ತ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಎಸ್. ಪಿ. ವೈ. ಎಸ್. ಎಸ್ ಯೋಗ ಸಮಿತಿಯಿಂದ ಮಂಗಳವಾರ 108 ಸೂರ್ಯ ನಮಸ್ಕಾರ ಮತ್ತು ಅಖಂಡ ಸೂರ್ಯನಮಸ್ಕಾರ ಕಾರ್ಯಕ್ರಮ ನಡೆಯಿತು. ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅರ್ಚಕರು ವೆಂಕಟ್ರಮಣ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಎಸ್.ಪಿ.ವೈ. ಎಸ್. ಎಸ್ ಜಿಲ್ಲಾ ಸಂಯೋಜಕರು ಕನಕ ಅಮೀನ್, ಜಿಲ್ಲಾ ಮಕ್ಕಳ ಶಿಕ್ಷಣ ಪ್ರಮುಖರು ಶ್ರೀಕಲ, ಕಾವೂರು ನಗರ ಸಂಚಾಲಕರು ಶ್ರೀನಿವಾಸ ಜೋಶಿ, ಕಾರ್ಯಕ್ರಮದ ಸಂಚಾಲಕರಾದ ನಾಗೇಶ್ , ಶ್ರೀನಿವಾಸ, ಮನೋಹರ ಉಪಸ್ಥಿತರಿದ್ದರು.

ಪೊರ್ಕೋಡಿ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಆನಂದ ಪ್ರಸಾದ್ ಸಾಮಾನಿ ದೊಡ್ಡ ಕಂಬಳಗುತ್ತು ಕಾರ್ಯಕ್ರಮಕ್ಕೆ ಶುಭಕೋರಿದರು. ಬೆಳೆಗ್ಗೆ 4.30ಕ್ಕೆ ಭಜನೆಯೊಂದಿಗೆ ಕಾರ್ಯ ಕ್ರಮ ಪ್ರಾರಂಭಗೊಂಡು ಅಮೃತವಚನ, ಪಂಚಾಂಗಪಠಣ ಹಾಗೂ ಮಾನಸಿಕ ಸಿದ್ಧತೆ, ಉಸಿರಾಟದ ಕ್ರಿಯೆ ಹಾಗೂ ಗಣಪತಿ ನಮಸ್ಕಾರ ಮಾಡಲಾಯಿತು. ಯೋಗಬಂಧುಗಳು 108 ಸೂರ್ಯನಮಸ್ಕಾರ ಮಾಡಿದರು. ಬೆಳೆಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಕಾವೂರು ನಗರದ ವಿವಿಧ ಶಾಖೆಗಳ ಯೋಗಬಂಧುಗಳು ಸೇರಿ ಅಖಂಡ ಸೂರ್ಯನಮಸ್ಕಾರ ನಡೆಯಿತು.

RELATED ARTICLES
- Advertisment -
Google search engine

Most Popular