Saturday, October 5, 2024
Homeಮಂಗಳೂರುಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಮಂಗಳೂರು : 10ನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಮಂಗಳೂರು : 10ನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಉದ್ಯಮಾಡಳಿತ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರ ನೇತೃತ್ವದಲ್ಲಿ 10ನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆಯನ್ನು ಜೂನ್ 21ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಯೋಗ ಪ್ರತಿಷ್ಠಾನ ಮಂಗಳೂರು ಇದರ ಸ್ಥಾಪಕರಾದ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಆಗಮಿಸಿ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು.

ಉದ್ಘಾಟಕರಾಗಿ ಆಗಮಿಸಿದ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಇವರು ಯೋಗದ ಮಹತ್ವ ಹಾಗೂ ಯೋಗ ಮಾಡುವುದರಿಂದ ರೋಗ ಮುಕ್ತರಾಗಬಹುದು ಎನ್ನುವ ಮಾತನ್ನು ಮುಂದಿಟ್ಟು, ವಿದ್ಯಾರ್ಥಿಗಳನ್ನು ಯೋಗದಡೆಗೆ ಪ್ರೇರೇಪಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ.ಅರುಣಾ ಪಿ.ಕಾಮತ್ ಅವರು ಯೋಗ ಕೇವಲ ಈ ದಿನಕ್ಕೆ ಮಾತ್ರ ಸೀಮಿತವಾಗದೆ, ಪ್ರತಿ ದಿನ ಯೋಗ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಗಣ್ಯರೊಂದಿಗೆ ಪ್ರಾಂಶುಪಾಲರಾದ ಪ್ರೊ.ಅರುಣಾ ಪಿ.ಕಾಮತ್ ಜೊತೆಗೆ ಸಾನ್ವಿ ಶೆಟ್ಟಿ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಸುದರ್ಶನ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಶಿಕ್ಷಕ ಸಂಯೋಜಕರಾದ ಡಾ. ಜ್ಯೋತಿ, ವಿದ್ಯಾರ್ಥಿ ಸಂಯೋಜಕರಾದ ಭವಿಷ್ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಸಂಘ ವಿಕಸನವು ಉದ್ಘಾಟನಾ ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿದ್ದು,
ಗೀತಾ ನಿರೂಪಿಸಿ,ಮಾನಸ ಇವರು ಸ್ವಾಗತಿಸಿ, ಧನ್ಯ ವಂದಿಸಿದರು.

RELATED ARTICLES
- Advertisment -
Google search engine

Most Popular