ಮಂಗಳೂರಿನ ಉಳ್ಳಾಲ ಸಮೀಪದ ಕೋಟೆಕಾರು ಬ್ಯಾಂಕ್‌ನಲ್ಲಿ ನಡೆದಿದ್ದ ದರೋಡೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕಿರಾತಕರು ಮುಸುಕುದಾರಿಗಳಾಗಿ ಬಂದು ಕೃತ್ಯ ನಡೆಸಿದ್ದಾರೆ. ದರೋಡೆಕೋರರರು 6 ನಿಮಿಷದಲ್ಲೇ 12 ಕೋಟಿಯಷ್ಟು ಚಿನ್ನ, ನಗದು ಹಣವನ್ನು ನಾಲ್ಕೈದು ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದ ಸಂದರ್ಭ ನೋಡಿಯೇ ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದ ದುಷ್ಕರ್ಮಿಗಳು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲೂ ಖತರ್ನಾಕ್ ಪ್ಲಾನ್ ಮಾಡಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಪೊಲೀಸರನ್ನು ಗೊಂದಲಕ್ಕೀಡು ಮಾಡುವುದಕ್ಕಾಗಿಯೇ ದರೋಡೆಕೋರರು ಎರಡು ಒಂದೇ ರೀತಿಯ ಕಾರಿನಲ್ಲಿ ಬಂದಿದ್ದರು. ಹೆದ್ದಾರಿ ತಲುಪುತ್ತಿದ್ದಂತೆಯೇ ಒಂದು ಕಾರು ಮಂಗಳೂರಿನ ಕಡೆ ತೆರಳಿದ್ದರೆ, ಇನ್ನೊಂದು ಕಾರು ಕೇರಳ ಕಡೆ ಪರಾರಿಯಾಗಿದೆ. ಹೀಗೆ ಎರಡು ಕಾರುಗಳಲ್ಲಿ ದರೋಡೆಕೋರರು ಬೇರ್ಪಟ್ಟಿದ್ದಾರೆ. ಕೃತ್ಯ ಎಸಗುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿಯ ಮೊಬೈಲ್ ಫೋನನ್ನೂ ದರೋಡೆಕೋರರು ಕಿತ್ತುಕೊಂಡು ಹೋಗಿದ್ದಾರೆ. ದರೋಡೆಕೋರರ ಒಂದು ತಂಡ ಮಂಗಳೂರು ನಗರದ ಕಡೆಗೆ ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ ಮೊಬೈಲ್ ಎಸೆದು ಹೋಗಿದ್ದಾರೆ. ಸದ್ಯ ಹೆಜಮಾಡಿ ಬಳಿ ಆ ಮೊಬೈಲ್ ಪತ್ತೆಯಾಗಿದೆ.
ಕೇವಲ 6 ನಿಮಿಷದಲ್ಲಿ 12 ಕೋಟಿ ಲೂಟಿ: ದರೋಡೆಕೋರರು ಪರಾರಿ!
ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕೆಸಿ ರೋಡ್ ಶಾಖೆಗೆ ಜ. 17ರ ಶುಕ್ರವಾರ ಮಧ್ಯಾಹ್ನ ಫಿಯೆಟ್ ಕಾರಿನಲ್ಲಿ ಆಗಮಿಸಿದ ಐವರು ಆಗಂತುಕರ ತಂಡ, ಬಂದೂಕು ತೋರಿಸಿ ಡಕಾಯಿತಿ ಮಾಡಿತ್ತು. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿದ್ದ ಚಿನ್ನ, ಒಡವೆ, ನಗದುಗಳೆಲ್ಲವನ್ನೂ ದೋಚಿಕೊಂಡು ಪರಾರಿಯಾಗಿತ್ತು.
ಕಳವಾದ ವಸ್ತುಗಳ ಪೈಕಿ 11 ಲಕ್ಷ ರೂ. ನಗದು ಇದ್ದರೆ, ಇನ್ನುಳಿದಿದ್ದು ಚಿನ್ನಾಭರಣ. ಒಟ್ಟು 12 ಕೋಟಿ ರೂ. ನಗನಾಣ್ಯ ಲೂಟಿ ಮಾಡಿರುವ ಬಗ್ಗೆ ಅಂದಾಜಿಸಲಾಗಿದೆ. ಅದೇ ಸಂಧರ್ಭದಲ್ಲಿ ರಸ್ತೆ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳಿಗೂ ದರೋಡೆಕೋರರು ಬೆದರಿಸಿದ್ದರು ಎಂಬುದು ತಿಳಿದುಬಂದಿದೆ.
ತಲಪಾಡಿ ಟೋಲ್ ಗೇಟ್‌ನಲ್ಲಿ 150 ರೂಪಾಯಿ ಹಣ ಕೊಟ್ಟು ರಶೀದಿಯನ್ನು ದರೋಡೆಕೋರರು ಪಡೆದ್ದು, ಈ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇನ್ನು ನಂಬರ್ ಪ್ಲೇಟ್ ಫೇಕ್ ಆಗಿದ್ದರಿಂದ ಕಾರಿಗೆ ಫಾಸ್ಟಾಗ್ ಇರಲಿಲ್ಲ ಎಂದು ತಿಳಿದು ಬಂದಿದೆ.
ದರೋಡೆಕೋರರು ಕಾರಿಗೆ KA04 MQ9923 ಎಂಬ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡಿದ್ದಾರೆ. ಈ ನಂಬರ್ ಪ್ಲೇಟ್ ಡಿಟೇಲ್ ತೆಗೆದು ನೋಡಿದ ಪೊಲೀಸರಿಗೆ ಶಾಕ್ ಆಗಿದೆ. KA04 MQ9923 ನಂಬರ್ ನ ಅಸಲಿ ಮಾಲೀಕನಿಗೆ ಪೊಲೀಸರು ಕರೆ ಮಾಡಿದಾಗ ಶಾಕ್‌ಗೆ ಒಳಗಾಗಿದ್ದಾನೆ. ಈ ಮೂಲಕ ಖದೀಮರು ಫೇಕ್ ನಂಬರ್ ಪ್ಲೇಟ್ ಹಾಕಿರುವುದು ಖಚಿತವಾಗಿದೆ. ತಲಪಾಡಿ ಟೋಲ್ ಗೇಟ್ ಮೂಲಕ ದರೋಡೆಕೋರರು ಕೇರಳದತ್ತ ಪರಾರಿಯಾಗಿದ್ದಾರೆ. ಹೀಗಾಗಿ ದರೋಡೆಕೋರರ ಜಾಡು ಹಿಡಿದು 2 ಪೊಲೀಸರ ತಂಡ ಕೇರಳದ ಕಾಸರಗೋಡು ಕಡೆ ಹೋಗಿದೆ.
ಇನ್ನು ದರೋಡೆಕೋರರರು 6 ನಿಮಿಷದಲ್ಲೇ 12 ಕೋಟಿಯಷ್ಟು ಚಿನ್ನ, ನಗದು ಹಣವನ್ನು ನಾಲ್ಕೈದು ಚೀಲದಲ್ಲಿ ತುಂಬಿಕೊ0ಡು ಹೋಗಿದ್ದಾರೆ. ಆ ಆರು ನಿಮಿಷರಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲವನ್ನು ದೋಚಿ ಓಡಿಹೋಗುವ ಪ್ಲ್ಯಾನ್‌ನಲ್ಲಿದ್ದರು.
ಇದೇ ಆತುರದಲ್ಲಿ ಸುಮಾರು 6 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನವನ್ನು ಬಿಟ್ಟು ಹೋಗಿದ್ದಾರೆ. ಸುಮಾರು 12ಕೆಜಿಯಷ್ಟು ಚಿನ್ನವನ್ನು ಬ್ಯಾಂಕ್?ನಲ್ಲಿಯೇ ಉಳಿಸಿದ್ದು, ಆ ಸಮಯದಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೂ ದೋಚಿಕೊಂಡು ಹೋಗಿದ್ದಾರೆ. ಎಲ್ಲಾ ಹೊತ್ತುಕೊಂಡು ಹೋಗುವಷ್ಟರಲ್ಲಿ ಒಂದು ಪೊಲೀಸರಿಗೆ ಸಮಯ ಕೊಟ್ಟ ಹಾಗೆ ಆಗುತ್ತೆ. ಇನ್ನೊಂದು ಎತ್ತುಕೊಂಡು ಹೋಗಲು ಭಾರವಾಗುತ್ತೆ ಎಂಬ ಕಾರಣದಿಂದ ಬಿಟ್ಟು ಹೋಗಿರುವ ಶಂಕೆಯಿದೆ.
ಇನ್ನು ಈ ಪ್ರಕರಣವಾದ ಬಳಿಕ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟವರು ಹಾಗೂ ಚಿನ್ನ ಅಡವಿಟ್ಟವರು ಆತಂಕಗೊಂಡಿದ್ದಾರೆ. ನಮ್ಮ ಠೇವಣಿ ಹಣ ವಾಪಸ್ ಬರುತ್ತೋ ಇಲ್ಲೋ ಎನ್ನುವ ಆತಂಕದಲ್ಲಿದ್ದರೆ, ಇನ್ನು ಚಿನ್ನ ಗಿರಿವಿ ಇಟ್ಟ ಮಾಲೀಕರು ಸಹ ಚಿಂತೆ ಮಾಡುತ್ತಿದ್ದಾರೆ. ಇನ್ನು ಇದೀಗ ಗ್ರಾಹಕರ ಬಗ್ಗೆ ಕೋಟೆಕಾರು ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯಿಸಿದ್ದು, 19 ಕೋಟಿಯಷ್ಟು ಇನ್ಯೂರೆನ್ಸ್ ಇದೆ, ಗ್ರಾಹಕರು ಗಾಬರಿ ಆಗಬೇಕಿಲ್ಲ. ಇನ್ಯೂರೆನ್ಸ್ ಸಂಸ್ಥೆಯವರು ಎಲ್ಲಾ ಸರಿ ಮಾಡೋಣವೆಂದು ಹೇಳಿ ಹೋಗಿದ್ದಾರೆ. ಗ್ರಾಹಕರಿಗೆ ಅವರ ಮೊತ್ತ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.