Sunday, July 14, 2024
Homeಅಪಘಾತ12 ಕೋಟಿ ರೂ. ವೆಚ್ಚದ ಬಕ್ರಾ ನದಿ ಸೇತುವೆ ಉದ್ಘಾಟನೆಗೂ ಮುನ್ನ ಕುಸಿತ

12 ಕೋಟಿ ರೂ. ವೆಚ್ಚದ ಬಕ್ರಾ ನದಿ ಸೇತುವೆ ಉದ್ಘಾಟನೆಗೂ ಮುನ್ನ ಕುಸಿತ

ಪಾಟ್ನಾ : 12 ಕೋಟಿ ರೂ. ವೆಚ್ಚದಲ್ಲಿ ಬಿಹಾರದ ಅರಾರಿಯಾದಲ್ಲಿ ಬಕ್ರಾ ನದಿಗೆ ನಿರ್ಮಿಸಲಾಗಿದ್ದ ಸೇತುವೆಯು ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿದೆ.

ಸೇತುವೆ ಕುಸಿದು ಬಿದ್ದಿರುವ ವೀಡಿಯೋವನ್ನು ಸಾರ್ವಜನಿಕರು ಸೆರೆಹಿಡಿದಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ವೀಡಿಯೋದಲ್ಲಿ ಸೇತುವೆ ಒಂದು ಬದಿಗೆ ವಾಲಿರುವುದನ್ನು ತೋರಿಸುತ್ತದೆ. ಈ ವೇಳೆ ಸೇತುವೆಯ ಬಳಿ ನದಿಯ ದಡದಲ್ಲಿ ನಿಂತಿದ್ದ ಜನ ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕುಸಿದ ಸೇತುವೆಯ ಭಾಗವು ಕೆಲವೇ ಕ್ಷಣಗಳಲ್ಲಿ ಕೊಚ್ಚಿಕೊಂಡು ಹೋಯಿತು. ಈ ಘಟನೆಯಲ್ಲಿ ಸದ್ಯ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

RELATED ARTICLES
- Advertisment -
Google search engine

Most Popular