ಸುಳ್ಯ: 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 14 ಗ್ರಾಮ ಪಂಚಾಯತ್ ಗಳಲ್ಲಿ ಶೇ. 100 ತೆರಿಗೆ ಸಂಗ್ರಹವಾಗಿದೆ. ಜಿಲ್ಲೆಯ 9 ತಾಲೂಕುಗಳಲ್ಲಿ ಬರುವ 223 ಗ್ರಾಮ ಪಂಚಾಯತ್ ಗಳಲ್ಲಿ ಶೇ. 81.34 ತೆರಿಗೆ ಸಂಗ್ರಹವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮನೆ ತೆರಿಗೆ, ಶಿಕ್ಷಣ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕರ ಕರ, ಬೀದಿದೀಪ ಕರ, ನೀರಿನ ಕರ, ನೀರು ನೈರ್ಮಲ್ಯ ಕರ, ಕಟ್ಟಡ ಪರವಾನಗಿ ಶುಲ್ಕ, ಉದ್ದಿಮೆ ಶುಲ್ಕ, ಮಳಿಗೆಗಳ ಬಾಡಿಗೆ, ಸಂತೆ ಕರ ಮುಂತಾದುವುಗಳನನ್ಉ ಒಳಗೊಂಡಿದೆ.
ಸುಳ್ಯದಲ್ಲಿ ಶೇ. 90.84 ಗರಿಷ್ಠ ತೆರಿಗೆ ಸಂಗ್ರಹವಾಗಿದೆ. ಬೆಳ್ತಂಗಡಿ ಶೇ. 88.80, ಪುತ್ತೂರು ಶೇ. 87.19, ಕಡಬ ಶೇ. 86.91, ಮಂಗಳೂರು ಶೇ. 81.86, ಮೂಡುಬಿದಿರೆ ಶೇ. 81.58, ಮೂಲ್ಕಿ ಶೇ. 81.11, ಉಳ್ಳಾಲ ಶೇ. 78.10, ಬಂಟ್ವಾಳ ಶೇ. 69.53 ತೆರಿಗೆ ಸಂಗ್ರಹವಾಗಿದೆ. ಒಟ್ಟು 50,24,66,912 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.