ಬೆಳ್ತಂಗಡಿ : ಅಲ್ಲಿಂಗೇರಿಯಲ್ಲಿ ನಡೆದ 14 ನೇ ವಯೋಮಾನದ ಪ್ರಾಥಮಿಕ ಶಾಲಾ ಬಾಲಕರ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಬಾಲಕರ ವಿಭಾಗದಲ್ಲಿ ಉತ್ತಮ ಹೊಡೆತಗಾರನಾಗಿ ಪ್ರಣೀಶ್ , ಉತ್ತಮ ಪಾಸರ್ ಕೌಶಿಕ್ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಣಮಿ ಉತ್ತಮ ಹೊಡೆತಗಾರ್ತಿಯಾಗಿ ಹಾಗೂ ಉತ್ತಮ ಪಾಸರ್ ಸಿಂಚನ ಮೂಡಿಬಂದಿರುತ್ತಾರೆ.
ಪಂದ್ಯಾಟದಲ್ಲಿ ಎರಡೂ ತಂಡಗಳು ಜಿಲ್ಲಾ ಮಟ್ಟಕ್ಕೆ ಅಯ್ಕೆಯಾಗಿದ್ದು ಶಾಲಾ ಮುಖ್ಯೋಪಾಧ್ಯಾಯ ಮಂಜನಾಯ್ಕ ಹಾಗೂ ಎಸ್ ಡಿಎಂಸಿ ಅಧ್ಯಕ್ಷರು ಮತ್ತು ಸರ್ವಸದಸ್ಯರು, ಶಿಕ್ಷಕ ವೃಂದ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿರುತ್ತಾರೆ .

ವಿಜೇತ ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ತರಬೇತಿ ನೀಡಿರುತ್ತಾರೆ.