Wednesday, April 23, 2025
Homeಬಂಟ್ವಾಳ14ನೇ ಹೊನಲು ಬೆಳಕಿನ 'ಮೂಡೂರು-ಪಟ್ಟೂರು' ಜೋಡುಕರೆ ಬಯಲು ಕಂಬಳ ಸಮಾಪನ

14ನೇ ಹೊನಲು ಬೆಳಕಿನ ‘ಮೂಡೂರು-ಪಟ್ಟೂರು’ ಜೋಡುಕರೆ ಬಯಲು ಕಂಬಳ ಸಮಾಪನ

ಬಂಟ್ವಾಳ: ಮೂಡೂರು -ಪಡೂರು ಕಂಬಳ ಸಮಾಪನ ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ ಪ್ರಥಮ

ಬಂಟ್ವಾಳ: ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಶನಿವಾರ ಆರಂಭಗೊಂಡ 14 ನೇ ವರ್ಷದ ಹೊನಲು ಬೆಳಕಿನ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳ ಭಾನುವಾರ ಸಮಾಪನಗೊಂಡಿತು. ಹಗ್ಗ ಹಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಎಸ್. ಕೋಟ್ಯಾನ್ ‘ಬಿ’ ಪ್ರಥಮ ಮತ್ತು ನಂದಳಿಕೆ ಶ್ರೀಕಾಂತ್ ಭಟ್ ‘ಎ’ ದ್ವಿತೀಯ ಬಹುಮಾನ ಗೆದ್ದುಕೊಂಡಿದೆ.

ಈ ಬಾರಿ ಒಟ್ಟು 168 ಜೊತೆ ಕೋಣಗಳು ಭಾಗವಹಿಸಿದ್ದು, ಕನೆ ಹಲಗೆ: 10 ಜೊತೆ, ಅಡ್ಡಹಲಗೆ: 06 ಜೊತೆ, ಹಗ್ಗ ಹಿರಿಯ: 20 ಜೊತೆ, ನೇಗಿಲು ಹಿರಿಯ: 24 ಜೊತೆ, ಹಗ್ಗ ಕಿರಿಯ: 22 ಜೊತೆ, ನೇಗಿಲು ಕಿರಿಯ: 86 ಜೊತೆ ಭಾಗವಹಿಸಿ ಗಮನ ಸೆಳೆಯಿತು. ಫಲಿತಾಂಶ: ಕನೆ ಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ ಹಲಗೆ ಮುಟ್ಟಿದವರು: ಭಟ್ಕಳ ಪಾಂಡು, ಬೀಯಪಾದೆ ಕೆರೆಕೋಡಿ ಗುತ್ತು ಶೇಖರ ಪೂಜಾರಿ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ, ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್ (11.53) ಹಲಗೆ ಮುಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ: ಅಲ್ಲಿಪಾದೆ ಕೆಳಗಿನ ಮನೆ ವಿನ್ಸೆಂಟ್ ಪಿಂಟೋ ‘ಎ’ (12.62) ಹಲಗೆ ಮುಟ್ಟಿದವರು: ಮಂದಾತರ್ ಭರತ್ ನಾಯ್ಕ್, ಹಗ್ಗ ಹಿರಿಯ: ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ ‘ಬಿ’ (11.48) ಓಡಿಸಿದವರು: ಕಕ್ಕೆಪದವು ಪೆಂಗರ್ಲು ಕೃತಿಕ್ ಗೌಡ, ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ ‘ಎ’ (11.55) ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ ಹಗ್ಗ ಕಿರಿಯ: ಪ್ರಥಮ: ಲೊರೆಟ್ಟೋ ಮಹಲ್ ತೋಟ ಆನ್ಯ ಅವಿಲ್ ಮಿನೇಜಸ್ (11.68) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ, ದ್ವಿತೀಯ: ಸುರತ್ಕಲ್ ಖಂಡಿಗೆ ಕುಸುಮಾಕರ್ ಸುವರ್ಣ (11.77) ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ನೇಗಿಲು ಹಿರಿಯ: ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (11.25) ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ಕಕ್ಕೆಪದವು ಪೆಂಗರ್ಲು ಬಾಬು ತನಿಯಪ್ಪ ಗೌಡ (11.41) ಓಡಿಸಿದವರು: ಕಕ್ಕೆಪದವು ಪೆಂಗರ್ಲು ಕೃತಿಕ್ ಗೌಡ, ನೇಗಿಲು ಕಿರಿಯ: ಪ್ರಥಮ: ದೂಜ ಅಭಿಮಾನಿ ಬಳಗ (11.80) ಓಡಿಸಿದವರು: ಬೈಂದೂರು ಮಂಜುನಾಥ ಗೌಡ, ದ್ವಿತೀಯ: ಮಿಜಾರು ಪ್ರಸಾದ್ ನಿಲಯ ಪ್ರಸಿದ್ಧ್ ಶೆಟ್ಟಿ (12.13) ಓಡಿಸಿದವರು: ಬಾರಾಡಿ ನತೇಶ್.

RELATED ARTICLES
- Advertisment -
Google search engine

Most Popular