Saturday, April 19, 2025
Homeಬಂಟ್ವಾಳ14 ನೇ ವರ್ಷದ ಹೊನಲು ಬೆಳಕಿನ 'ಮೂಡೂರು-ಪಡೂರು' ಜೋಡುಕರೆ ಬಯಲು ಕಂಬಳ ಸಭಾ ಕಾರ್ಯಕ್ರಮ

14 ನೇ ವರ್ಷದ ಹೊನಲು ಬೆಳಕಿನ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳ ಸಭಾ ಕಾರ್ಯಕ್ರಮ

ಬಂಟ್ವಾಳ: 14ನೇ ವರ್ಷದ ‘ಮೂಡೂರು-ಪಡೂರು’ ಜೋಡುಕರೆ ಕಂಬಳ ಶಿಸ್ತುಬದ್ಧ ಕಂಬಳಕ್ಕೆ ಕಾನೂನು ಮಾನ್ಯತೆ: ಮಾಜಿ ಸಚಿವ ಟಿ.ಬಿ.ಜಯಚಂದ್ರ

ಬಂಟ್ವಾಳ: ಸುಶಿಕ್ಷಿತ ಮತ್ತು ಸುಸಂಸ್ಕೃತ ಜನರನ್ನು ಹೊಂದಿರುವ ಅವಿಭಜಿತ ಜಿಲ್ಲೆಯ ಕೃಷಿಕರು ನಡೆಸುತ್ತಿರುವ ಶಿಸ್ತುಬದ್ಧ ಕಂಬಳಕ್ಕೆ ನಾನು ಕಾನೂನು ಸಚಿವನಾಗಿದ್ದ ವೇಳೆ ನಿಷೇಧ ಹೇರಲು ಭಾರೀ ಒತ್ತಡ ಬಂದಿತ್ತು. ಆದರೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮತ್ತಿತರ ಕಂಬಳಾಭಿಮಾನಿಗಳ ಅವರ ಆಶಯದಂತೆ ಪುತ್ತೂರಿನ ಕೊಯಿಲಕ್ಕೆ ಪಶು ವೈದ್ಯಕೀಯ ಕಾಲೇಜು ಮತ್ತು ಕಂಬಳಕ್ಕೆ ಕಾನೂನು ಮಾನ್ಯತೆ ನೀಡುವ ಮೂಲಕ ನಿರಾತಂಕವಾಗಿ ಕಂಬಳ ನಡೆಸಲು ಸಾಧ್ಯವಾಗಿರುವುದು ನನಗೆ ಸಂತಸ ತಂದಿದೆ ಎಂದು ಮಾಜಿ ಸಚಿವ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದ್ದಾರೆ. ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಶನಿವಾರ ರಾತ್ರಿ ನಡೆದ 14 ನೇ ವರ್ಷದ ಹೊನಲು ಬೆಳಕಿನ ‘ಮೂಡೂರು-ಪಡೂರು’ ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಇದೇ ವೇಳೆ ಕಂಬಳ ಸಮಿತಿ ವತಿಯಿಂದ ಟಿ.ಬಿ.ಜಯಚಂದ್ರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಈ ಹಿಂದೆ ಅದ್ದೂರಿಯಾಗಿ ಕಂಬಳ ನಡೆಸಿ ಗಮನ ಸೆಳೆದಿದ್ದ ‘ಮೂಡೂರು-ಪಡೂರು’ ಕಂಬಳ ನಿಲ್ಲಿಸಲು ಅಂದಿನ ಕೇಂದ್ರ ಸಚಿವ ಮೇನಕಾ ಗಾಂಧಿಗೆ ಕೆಲವೊಂದು ವಿರೋಧಿಗಳು ದೂರು ಸಲ್ಲಿಸಿ ವಿಫಲರಾಗಿದ್ದರು’ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶಾಸಕರಾದ ಶರತ್ ಬಚ್ಚೇಗೌಡ, ಕೆ.ಮಂಜುನಾಥ ಭಂಡಾರಿ, ಅಶೋಕ್ ಕುಮಾರ್ ರೈ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಪದ್ಮರಾಜ್ ಆರ್.ಪೂಜಾರಿ, ಮಿಥುನ್ ರೈ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಮತಾ ಎಸ್.ಗಟ್ಟಿ ಮಾತನಾಡಿದರು. ಮಾಜಿ ಶಾಸಕ ಮೊಯ್ದಿನ್ ಬಾವ, ಬೂಡ ಅಧ್ಯಕ್ಷ ಬೇಬಿ ಕುಂದರ್, ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಕಾಪರ್ರೇಟರ್ ಶಶಿಧರ ಹೆಗ್ಡೆ, ನವೀನ ಡಿಸೋಜ, ಪ್ರವೀಣ್ ಚಂದ್ರ ಆಳ್ವ, ವಕೀಲ ಅಶ್ವನಿ ಕುಮಾರ್ ರೈ, ಧಾಮರ್ಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಕ್ಕಳ, ಜಗನ್ನಾಥ ಚೌಟ ಬದಿಗುಡ್ಡೆ, ದೇವಪ್ಪ ಕುಲಾಲ್, ಪ್ರಮುಖರಾದ ಧನಭಾಗ್ಯ ಆರ್.ರೈ, ಶೈಲಜಾ ರಾಜೇಶ್, ಜೋಸ್ಪೀನ್ ಡಿಸೋಜ, ರೋಹಿತ್ ಹೆಗ್ಡೆ ಎಮರ್ಳ್, ಬಾಕರ್ರು ಶಾಂತಾರಾಮ ಶೆಟ್ಟಿ, ಚಂದ್ರಹಾಸ ಶೆಟ್ಟಿ ಪುತ್ತೂರು, ಪ್ರಶಾಂತ ಕಾಜವ, ಎಂ.ಎಸ್.ಮಹಮ್ಮದ್, ಇಬ್ರಾಹಿಂ ನವಾಜ್ ಬಡಕಬೈಲು, ಕಂಬಳ ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾಯರ್ಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಧಾನ ಕಾರ್ಯದಶರ್ಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಪಿಲಿಫ್ ಫ್ರಾಂಕ್, ಉಪಾಧ್ಯಕ್ಷರಾದ ಕೆ.ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅವಿಲ್ ಮಿನೇಜಸ್, ಸುದೀಪ್ ಕುಮಾರ್ ಶೆಟ್ಟಿ, ಚಂದ್ರಶೇಖರ ಭಂಡಾರಿ, ಬಿ.ಆರ್.ಅಂಚನ್, ಕೆ.ಪದ್ಮನಾಭ ರೈ, ಸುದರ್ಶನ್ ಜೈನ್, ಅಬ್ಬಾಸ್ ಆಲಿ, ಉಮೇಶ ಕುಮಾರ್ ನಾವೂರು, ರಾಜೇಶ್ ರಾಡ್ರಿಗಸ್, ಪ್ರವೀಣ್ ರಾಡ್ರಿಗಸ್, ಚಿತ್ತರಂಜನ್ ಶೆಟ್ಟಿ, ಮಹಮ್ಮದ್ ನಂದಾವರ, ಗಣೇಶ ಪೂಜಾರಿ ವಗ್ಗ, ವೆಂಕಪ್ಪ ಪೂಜಾರಿ, ಶಬೀರ್ ಸಿದ್ಧಕಟ್ಟೆ, ಡೆಂಜಿಲ್ ನೊರೋನ್ಹ ಮತ್ತಿತರರು ಇದ್ದರು. ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಗುಣಪಾಲ ಕಡಂಬ ಸ್ವಾಗತಿಸಿ, ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಸ್ವಾಗತಿಸಿ, ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular