ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮೂಡುಕೋಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನ ರಿ. ಮೂಡುಕೋಡಿ ಪ್ರಗತಿಬಂಧು ಜ್ಞಾನವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟ ಮೂಡುಕೋಡಿ ಜನಜಾಗೃತಿ ಗ್ರಾಮ ಸಮಿತಿ ಮೂಡುಕೋಡಿ ಶೌರ್ಯ ವಿಪತ್ತು ಘಟಕ ಮೂಡುಕೋಡಿ ಹಾಗೂ ಶ್ರೀ ರಾಮ ಭಜನಾ ಮಂಡಳಿ ರಿ. ನಡ್ತಿಕಲ್ಲು ಮೂಡುಕೋಡಿ ಇವುಗಳ ಆಶ್ರಯದಲ್ಲಿ ನಡ್ತಿಕಲ್ಲು ಶ್ರೀ ರಾಮ ಭಜನಾ ಮಂದಿರದ ಸಭಾ ಭವನದಲ್ಲಿ 15 ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ಜಿಲ್ಲಾ ನಿದೇರ್ಶಕರಾದ ಮಹಾಬಲ ಕುಲಾಲ್ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುನೀತಾ ಬಿ. ವೇಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉಮೇಶ ನಡ್ತಿಕಲ್ಲು ಗ್ರಾಮ ಪಂಚಾಯತ್ ಸದಸ್ಯೆ ವೀಣಾ ದೇವಾಡಿಗ ವೇದಿಕೆಯಲ್ಲಿ ಒಕ್ಕೂಟ ಅಧ್ಯಕ್ಷರಾದ ಹರೀಶ್ ಪೂಜಾರಿ ನಳಿನಾಕ್ಷಿ ಭಜನಾ ಮಂದಿರದ ಅಧ್ಯಕ್ಷ ಪ್ರವೀಣ್ ಆಚಾರ್ಯ ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಪಿ. ಯಸ್. ಉಪಸ್ಥಿತರಿದ್ದರು ಕಾರ್ಯಕ್ರಮ ಅಧ್ಯಕ್ಷತೆಯನ್ನು ಪೂಜಾ ಸಮಿತಿ ಅಧ್ಯಕ್ಷ ಜಯಂತ ಶೆಟ್ಟಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಮೇಲ್ವಿಚಾರಕಿ ಶಾಲಿನಿ ಮಾಡಿದರು ಸುಪ್ರೀತಾ ಸ್ವಾಗತಿಸಿದರು ಸೇವಾಪ್ರತಿನಿಧಿ ಜಲಜರವರು ಧನ್ಯವಾದವಿತ್ತರು.
