Saturday, September 14, 2024
Homeರಾಜ್ಯ1500 ವರ್ಷಗಳ ಹಿಂದೂ-ಬೌದ್ಧ ಶಿಲ್ಪ ಪತ್ತೆ

1500 ವರ್ಷಗಳ ಹಿಂದೂ-ಬೌದ್ಧ ಶಿಲ್ಪ ಪತ್ತೆ

ಅಸ್ಸಾಂ ವಿಶ್ವವಿದ್ಯಾಲಯದ ಸಿಲ್ಚಾರ್ ಪ್ರಾಧ್ಯಾಪಕ ಮತ್ತು ಸಂಶೋಧನಾ ವಿದ್ವಾಂಸರು ಅಸ್ಸಾಂ-ಮಿಜೋರಾಂ ಗಡಿಯ ಸಮೀಪವಿರುವ ಬೆಟ್ಟದ ಮೇಲೆ 1500 ವರ್ಷಗಳ (8 ನೇ ಶತಮಾನ) ಹಿಂದೂ ಮತ್ತು ಬೌದ್ಧ-ಪ್ರಭಾವಿತ ಶಿಲ್ಪಗಳನ್ನು ಪತ್ತೆ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಅಸ್ಸಾಂ ವಿಶ್ವವಿದ್ಯಾನಿಲಯದ ದೃಶ್ಯ ಕಲೆಗಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಗಣೇಶ್ ನಂದಿ ಮತ್ತು ಸಂಶೋಧಕ ಡಾ ಬಿನೋಯ್ ಪಾಲ್ ಅವರು ಪ್ರತಿಮೆಗಳನ್ನು ಕಂಡುಹಿಡಿದಿದ್ದಾರೆ. ಅಸ್ಸಾಂನ ಹೈಲಕಂಡಿ ಜಿಲ್ಲೆಯಿಂದ, ಇಬ್ಬರೂ ಅಸ್ಸಾಂ ಮತ್ತು ಮಿಜೋರಾಂ ನಡುವಿನ ರಾಜ್ಯದ ಗಡಿಯನ್ನು ದಾಟಿ, ಸುಮಾರು ಒಂದು ರಾತ್ರಿ ಕಾಡಿನಲ್ಲಿ ಸಮಯ ಕಳೆದು ನಂತರ ಈ ಶಿಲ್ಪವನ್ನ ಪತ್ತೆ ಮಾಡಿದ್ದಾರೆ. ಮಿಜೋರಾಂನ ಮಮಿತ್ ಜಿಲ್ಲೆಯ ಕೊಲಾಲಿಯನ್ ಗ್ರಾಮದಲ್ಲಿ ಈ ಪ್ರತಿಮೆಗಳನ್ನು ಕಂಡು ಹಿಡಿಯಲಾಗಿದ್ದು, ಆ ಪ್ರದೇಶದಲ್ಲಿ ವಾಸಿಸುವವರಲ್ಲಿ ಹೆಚ್ಚಿನವರು ಹಿಂದೂ ದೇವತೆಗಳನ್ನು ಪೂಜಿಸುವ ರಿಯಾಂಗ್ ಬುಡಕಟ್ಟು ಜನಾಂಗದವರಾಗಿದ್ದಾರೆ. ಸದ್ಯ ಸಿಕ್ಕಿರುವವ ವಸ್ತುಗಳು ತ್ರಿಪುರಾದ ಉನಕೋಟಿ ಮತ್ತು ಪಿಲಾಕ್‌ನಲ್ಲಿ ಕಂಡುಬರುವ ಕಲಾಕೃತಿಗಳಿಗೆ ಗಮನಾರ್ಹ ಹೋಲಿಕೆಗಳನ್ನು ಹೊಂದಿವೆ ಎನ್ನಲಾಗುತ್ತಿದೆ, ಇದು 7 ನೇ ಮತ್ತು 9 ನೇ ಶತಮಾನದ ನಡುವೆ ಹುಟ್ಟಿಕೊಂಡಿದೆ ಎನ್ನುವ ನಂಬಿಕೆ ಸಹ ಇದೆ.

ಗುಪ್ತ ಮತ್ತು ಪಾಲ್ ಯುಗದ ಹೋಲಿಕೆ: ಸಂಶೋಧನೆಗಳ ಪೈಕಿ, ಅವರು ಭಗವಾನ್ ಬುದ್ಧನನ್ನು ಹೋಲುವ ಒಂದು ಪೂರ್ಣ-ಗಾತ್ರದ ಪ್ರತಿಮೆಯನ್ನು ಕಂಡು ಹಿಡಿದಿದ್ದಾರೆ. ಆದರೆ ಸ್ತ್ರೀಲಿಂಗ ರಚನೆಯನ್ನು ಹೊಂದಿದೆ ಎನ್ನಲಾಗುತ್ತಿದೆ. “ಇದು ಬುದ್ಧ ಅಥವಾ ಹಿಂದೂ ದೇವತೆಯೇ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಆದರೆ ಕಲಾ ಪ್ರಕಾರವು ಕಾಂಬೋಡಿಯಾದಲ್ಲಿ ಕಂಡುಬರುವ ಬುದ್ಧನ ವಿಗ್ರಹಗಳೊಂದಿಗೆ ಹೋಲಿಕೆಯನ್ನು ಹೊಂದಿದೆ” ಎಂದು ಡಾ ನಂದಿ ಹೇಳಿದ್ದಾರೆ. ಈ ಶಿಲ್ಪಗಳ ಕಲಾ ಶೈಲಿಯು ಗುಪ್ತ ಮತ್ತು ಪಾಲ್ ಯುಗಗಳಿಗೆ (7500 ಮತ್ತು 1200 CE ನಡುವೆ) ಹೋಲುತ್ತದೆ.

RELATED ARTICLES
- Advertisment -
Google search engine

Most Popular