Wednesday, July 24, 2024

ಪ್ರಜಾಪ್ರಭುತ್ವವನ್ನೇ ನಿಷ್ಕ್ರಿಯಗೊಳಿಸಿ 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಕರಾಳ ಇತಿಹಾಸವನ್ನು ಭಾರತೀಯರು ಎಂದೂ ಮರೆಯಲು ಸಾಧ್ಯವಿಲ್ಲ. ಇಂತಹ ಸಂವಿಧಾನ ವಿರೋಧಿ ನೀತಿಯನ್ನು ವಿರೋಧಿಸಿ ಇಂದು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಬೈಂದೂರು ಮಂಡಲ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಎಂಟು ಮಹಾಶಕ್ತಿ ಕೇಂದ್ರದಲ್ಲಿ ಪೋಸ್ಟರ್ ಅಂಟಿಸುದರ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಗಜೇಂದ್ರ. ಎಸ್. ಬೇಲೆಮನೆ ,ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಸುಧಾಕರ್ ಶೆಟ್ಟಿ ನೆಲ್ಯಾಡಿ, ಪ್ರಧಾನ ಕಾರ್ಯದರ್ಶಿ ಅನುರ ಮೆಂಡನ್, ಮಂಡಲ ಕಾರ್ಯದರ್ಶಿ ಕೃಷ್ಣ ಖಾರ್ವಿ ಕೊಡೇರಿ, ಮಂಡಲ ಯುವ ಮೋರ್ಚಾ ಉಪಾಧ್ಯಕ್ಷರಾದ ಪ್ರದೀಪ್ ಉಪ್ಪುಂದ, ವೇಣುಗೋಪಾಲ್ ಶೆಟ್ಟಿ ಅಜ್ರಿ, ಜಗದೀಶ್ ಕೊಠಾರಿ ಆಲಂದೂರು, ಡಿ ಕೆ ದೇವ ಪ್ರಕಾಶ್ ಪಡುವರಿ, ಕಾರ್ಯದರ್ಶಿ ಜಯಂತ್ ಗಂಗೊಳ್ಳಿ,ಬಿಜೆಪಿ ಮುಖಂಡರುಗಳಾದ ಡಾ. ಅತುಲ್ ಕುಮಾರ್, ಕರಣ್ ಪೂಜಾರಿ ತಲ್ಲೂರು, ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿ, ನವೀನ್ ಚಂದ್ರ ಉಪ್ಪುಂದ, ವೀರೇಂದ್ರ ಶೆಟ್ಟಿ ಗಂಟಿಹೊಳೆ, ಮಂಜುನಾಥ್ ದೇವಾಡಿಗ ನಾಗೂರು, ಜಯರಾಮ್ ಪಡಿಯರ್ ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular