ತುಳುನಾಡಿನಲ್ಲಿರುವ ದೈವ ದೇವರುಗಳ ಆರಾಧನೆಯಿಂದ ತುಳುನಾಡಿನಲ್ಲಿ ಸಂಸ್ಕಾರ ಸಂಸ್ಕೃತಿ ಒಳ್ಳೆಯ ರೀತಿಯಿಂದ ನಡೆದುಕೊಂಡು ಬಂದಿದೆ. ಮೂಲ್ಕಿ ಕೊಳಚಿಕಂಬಳ ಜಾರಂದಾಯ ದೈವದ ಕಳೆಯು ಬೇರೆ ದೈವಕ್ಕಿಂತ ವಿಭಿನ್ನವಾಗಿದೆ ಏಕೆಂದರೆ ಇದು ಮೂಲ್ಕಿ ಶ್ರೀ ದುರ್ಗಾಪರಮೇಶ್ವರಿ ದೇವರ ದೈವವಾಗಿದೆ ಎಂದು ವಿದ್ವಾನ್ ಕೃಷ್ಣರಾಜ ಭಟ್ ಹೇಳಿದರು.
ಅವರು ಕೊಳಚಿಕಂಬಳ ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ 16 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ಮಾಡಿ ಮಾತನಾಡಿದರು ಕೊಳಚಿಕಂಬಳದ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಭಕ್ತರು ಭಕ್ತಿಯಿಂದ ಆರಾಧನೆ ಮಾಡಿಕೊಂಡು ಬಂದರೆ ಅವರಿಗೆ ದೈವವು ಆರ್ಶಿವಾದ ಮಾಡುತ್ತದೆ. ದೈವಗಳು ಧರ್ಮ ತಪ್ಪಿ ನಡೆಯಬಾರದೆಂಬ ಸಂದೇಶವನ್ನು ಆಗಾಗ ಕೊಡುತ್ತಾ ಬರುತ್ತಿದೆ ಎಂದು ಹೇಳಿದರು.
ಮೂಲ್ಕಿ ನಗರ ಪಂಚಾಯತಿನ ಅಧ್ಯಕ್ಷರಾದ ಸತೀಶ್ ಅಂಚನ್ ರವರು ಗ್ರಾಮಸ್ಥರ ಬೇಡಿಕೆಯಂತೆ ಮೂಲ್ಕಿಗೆ ಅಮೃತ ಯೋಜನೆಯ ಗುರುಪುರದಿಂದ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದರು ಅದರಂತೆ ಕೊಳಚಿಕಂಬಳಕ್ಕೆ ಕಾಂಗ್ರೇಟ್ ರಸ್ತೆಯನ್ನು ಮಾಡಲು ಯೋಜನೆಯನ್ನು ಮಾಡಲಾಗಿದೆ ಎಂದರು. ಕೊಳಚಿಕಂಬಳ ಊರಿನ ಗುರಿಕಾರರಾದ ಹರಿಶ್ಚಂದ್ರ ಪಿ. ಸಾಲಿಯಾನ್ ರವರು ಜಾರಂದಾಯ ದೈವ ನೆಲೆಯಾಗಿರುವ ಬಗ್ಗೆ ವಿಷಯಗಳನ್ನು ಹೇಳಿದರು. ಅದಲ್ಲದೆ ಕೊಳಚಿಕಂಬಳ ಊರಿಗೆ ಬೇಕಾಗುವ ಅಭಿವೃದ್ಧಿ ಕೆಲಸವನ್ನು ಸಭೆಯಲ್ಲಿ ಹೇಳಿದರು.
ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಾಲ್ಫಿ ಡಿಕೋಸ್ಟ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು, ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ವಿಜಯ ರೈತರ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಸ್ವಯಂ ಭೂಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಲೋಕೇಶ್ ಆರ್ ಅಮೀನ್, ಬಿರುವೆರ್ ಕುಡ್ವ, ಮುಲ್ಕಿ ಘಟಕದ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಕೊಳಚಿಕಂಬಳ ಮಹಿಳಾ ಸಂಘದ ಅಧ್ಯಕ್ಷೆ ಲತಾ ಶೇಖರ್, ಯೂತ್ ಕ್ಲಬ್‌ನ ಅಧ್ಯಕ್ಷ ಜೀವನ್ ಕೋಟ್ಯಾನ್, ಕೃಷ್ಣ ಆರ್. ಕೋಟ್ಯಾನ್ ಪ್ರಾಣೇಶ್ ಪೂಜಾರಿ, ಜಾರಂದಾಯ ಸೇವಾ ಸಮಿತಿಯ ಯೂತ್ ಕ್ಲಬಿನ ಕಾರ್ಯದರ್ಶಿ ಕಾರ್ತಿಕ್ ಕೋಟ್ಯಾನ್, ಕೋಶಾಧಿಕಾರಿ ಪ್ರಫುಲ್ಲ, ಇವರೆಲ್ಲ ವೇದಿಕೆಯಲ್ಲಿ ಉಪಸ್ಥಿತರಿದರು. ಜಾರಂದಾಯ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ, ರವರು ಸ್ವಾಗತ ಮಾಡಿದರು. ಲತಾ ಶೇಖರವರ್ ವಂದನಾರ್ಪಣೆ ಮಾಡಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.