ಬಂಟ್ವಾಳ: ದೇಶದಲ್ಲಿ ವಿವಿಧ ಜಾತಿ ಮತ್ತು ಭಾಷೆ ಹಾಗೂ ಧರ್ಮಗಳ ಜನರು ಬಾಲ್ಯದಿಂದಲೇ ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸುವುದರ ಜೊತೆಗೆ ದೇಶಭಕ್ತಿ ಮತ್ತಿತರ ಸಂಸ್ಕಾರ ನೀಡಿದಾಗ ಸುಸಂಸ್ಕೃತ ಸಮಾಜ ನಿಮರ್ಾಣ ಸಾಧ್ಯವಾಗುತ್ತದೆ. ಇಂತಹ ಸಂಸ್ಕಾರ ಇಲ್ಲದ ಪರಿಣಾಮ ಬಾಂಗ್ಲಾ ಮತ್ತಿತರ ರಾಷ್ಟ್ರಗಳಲ್ಲಿ ಧಾಮರ್ಿಕ ಸಂಘರ್ಷಗಳ ಮೂಲಕ ದೇಶದ ಅವನತಿಯಾಗುತ್ತದೆ ಎಂದು ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದರು. ಇಲ್ಲಿನ ಬಿಲ್ಲವ ಸಮಾಜ ಸೇವಾ ಸೇವಾ ಸಂಘದ ವತಿಯಿಂದ ಗಾಣದಪಡ್ಪು ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜನ್ಮ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು. ಸಂಘದ ಅಧ್ಯಕ್ಷ ಬಿ. ಸಂಜೀವ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವೀಧರ ಶಿಕ್ಷಕಿ ಆರತಿ ದಾಸಪ್ಪ ಪೂಜಾರಿ ಉಪನ್ಯಾಸ ನೀಡಿ, ‘ಮಕ್ಕಳು ಪಠ್ಯದ ಜೊತೆಗೆ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಸಾಧನೆಯ ಮೆಟ್ಟಿಲು ಏರಲು ಸಾಧ್ಯವಿದೆ’ ಎಂದರು. ಇದೇ ವೇಳೆ ಪುರಸಭಾ ಅಧ್ಯಕ್ಷ ವಾಸು ಪೂಜಾರಿ ಮತ್ತು ಬೂಡಾ ಅಧ್ಯಕ್ಷ ಬೇಬಿ ಕುಂದರ್ ಸಹಿತ ಶೈಕ್ಷಣಿಕ ಸಾಧಕ ಪ್ರಜ್ವಲ್ ಕುಮಾರ್, ಕ್ರೀಡಾ ಸಾಧಕರಾದ ಸಿದ್ಧಾರ್ಥ ಎಂ.ಸಿ., ರಕ್ಷಾ ಜಿ., ಶರಣ್ಯ ಎನ್. ಟಿ. ಇವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಜೊತೆ ಕಾರ್ಯದಶರ್ಿ ರಾಜೇಶ್ ಸುವರ್ಣ ಮಿತ್ತಬೈಲು, ಲೆಕ್ಕಪರಿಶೋಧಕ ಹೇಮಂತ್ ಕುಮಾರ್ ಮೂಜರ್ೆ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್, ಯುವವಾಹಿನಿ ಘಟಕ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಮತ್ತಿತರರು ಇದ್ದರು. ಸಂಘದ ಪ್ರಧಾನ ಕಾರ್ಯದಶರ್ಿ ರಮೇಶ್ ತುಂಬೆ ಸ್ವಾಗತಿಸಿ, ಕೋಶಾಧಿಕಾರಿ ಆನಂದ ಸಾಲ್ಯಾನ್ ಶಂಭೂರು ವಂದಿಸಿದರು. ಯತೀಶ್ ಪೂಜಾರಿ ಶಂಭೂರು ಮತ್ತು ಶ್ರೀನಿವಾಸ ಪೂಜಾರಿ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.