Saturday, April 19, 2025
Homeಕೇರಳಯೂಟ್ಯೂಬ್ ನೋಡಿ ಡಯಟ್ ಟಿಪ್ಸ್ ಅನುಸರಿಸಿದ 18 ವರ್ಷದ ಯುವತಿ ಸಾವು

ಯೂಟ್ಯೂಬ್ ನೋಡಿ ಡಯಟ್ ಟಿಪ್ಸ್ ಅನುಸರಿಸಿದ 18 ವರ್ಷದ ಯುವತಿ ಸಾವು

ಕಣ್ಣೂರು: ತೂಕ ಇಳಿಸಲು ಯೂಟ್ಯೂಬ್ ನೋಡಿ ಡಯಟ್ ಮಾಡುತ್ತಿದ್ದ ಕೇರಳದ 18 ವರ್ಷದ ಯುವತಿ ಸರಿ ಯಾಗಿ ಆಹಾರ ಸೇವಿಸದೇ, ಕೇವಲ ನೀರು ಮಾತ್ರ ಕುಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಣ್ಣೂರಿನ ಕೂತುಪರಂಬ ನಿವಾಸಿ ಶ್ರೀನಂದಾ ಮೃತ ಯುವತಿ. ಆಕೆಯು ತೂಕ ಹೆಚ್ಚಾಗುವ ಭಯ ಹೊಂದಿ ರುವ ಅನೋ ರೆಕ್ಸಿಯಾ ನರ್ವೋಸಾ ಎನ್ನುವ ಅಸ್ವಸ್ಥತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ಸಮಸ್ಯೆಯಿಂದಾಗಿ ಆಕೆ ಯೂಟ್ಯೂಬ್ ನೋಡಿ ಡಯಟ್ ಪ್ಲ್ಯಾನ್ ಅರಂಭಿಸಿದ್ದಳು. 5-6 ತಿಂಗಳ ಕಾಲ ಕಮ್ಮಿ ಆಹಾರ ತಿಂದು ಹೆಚ್ಚು ಬಿಸಿ ನೀರು ಸೇವಿಸಿಕೊಂಡಿದ್ದಳು. ಈ ವಿಚಾರವನ್ನು ಕುಟುಂಬಸ್ಥರಿಂದ ಮುಚ್ಚಿಟ್ಟಿದ್ದಳು. ವೈದ್ಯರು ತಿಂಗಳ ಹಿಂದೆಯೇ ಸರಿಯಾಗಿ ತಿನ್ನುವಂತೆ ಸಲಹೆ ನೀಡಿದರೂ ಆಕೆ ಡಯಟ್ ಮುಂದುವರೆಸಿದ್ದರ ಪರಿಣಾಮ ಆರೋಗ್ಯ ಕ್ಷೀಣಿಸಿ ಪ್ರಾಣ ಕಳೆದುಕೊಂಡಿದ್ದಾಳೆ. ಶ್ರೀನಂದಾ 12 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೇವಲ 24 ಕೇಜಿ ತೂಕ ಹೊಂದಿದ್ದಳು.

RELATED ARTICLES
- Advertisment -
Google search engine

Most Popular