ತಾ-22/01/2024 ರಂದು ರಾಮಲಲ್ಲಾನ ಪ್ರತಿಷ್ಠೆಯಲ್ಲಿ ಭಾಗವಹಿಸಿದ ಶಂಕರಪುರ ಶ್ರೀ ಕ್ಷೇತ್ರ ಶಂಕರಪುರದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಯವರು ಮಂತ್ರಾಕ್ಷತೆ , ಜಲ, ಮಣ್ಣು ಧರಿಸಿದ ವಸ್ತ್ರದಲ್ಲಿ ಸಾವಿರಾರು ಸಾಧು – ಸಂತರ, ಪುಣ್ಯ ಪುರುಷರ ಉಸಿರಾಟದ ಸ್ಪರ್ಶ ಹಾಗೂ ಇಡೀ ಜಗತ್ತಿನ ಜನರ ದೃಷ್ಟಿ ಕಂಪನದ ಸ್ಪರ್ಶದ ಐತಿಹಾಸಿಕ ಕ್ಷಣದ ನೆನಪಿಗಾಗಿ ಹಾಗೂ ಮುಂದಿನ ಸನಾತನ ಪೀಳಿಗೆಯ ವೈಭವೀಕರಣಕ್ಕೆ ಸಾಕ್ಷಿಯಾಗಲಿ ಎಂಬ ಉದ್ದೇಶದಿಂದ ಸಂಗ್ರಹಿಸಿ ಪ್ರಥಮ ವಾರ್ಷಿಕೋತ್ಸವದ ಪುಣ್ಯ ದಿನವಾದ ತಾ.22/01/2025 ರಂದು ವಿಶೇಷವಾಗಿ ಪೂಜೆ ನೆರವೇರಿಸಿದರು.