ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ವಾರ್ಡಿನ ಬಿಲ್ಲವರ ಕೋಟ್ಯಾನ್ ಮೂಲಸ್ಥಾನ ಆದಿಕ್ಷೇತ್ರ ಸೇವಾ ಟ್ರಸ್ಟ್ ರಿ. ಸಂಪರ್ಕಿಸು ರಸ್ತೆ ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2.5 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಇಂದು ದಿನಾಂಕ 28-01-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷರಾದ ಸರಿತಾ ಶಿವಾನಂದ, ತೆಂಕ ಗ್ರಾಮ ಪಂಚಾಯತ್ ಸದಸ್ಯರಾದ ಜಯಶ್ರೀ, ಬಿಲ್ಲವರ ಕೋಟ್ಯಾನ್ ಮೂಲಸ್ಥಾನ ಆದಿಕ್ಷೇತ್ರ ಸೇವಾ ಟ್ರಸ್ಟ್ ರಿ ಅಧ್ಯಕ್ಷರಾದ ಗಂಗಾಧರ ಕೋಟ್ಯಾನ್, ಉಪಾಧ್ಯಕ್ಷರಾದ ವಾಸು ಕೋಟ್ಯಾನ್, ಗುರಿಕಾರರಿಗೆ ಪ್ರಕಾಶ್ ಕೋಟ್ಯಾನ್ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಶಾರಾದಾ ಕೆ ಪೂಜಾರಿ ಉಪಸ್ಥಿತರಿದ್ದರು.