ಮಂಗಳೂರು : ಸ್ಕೇಟಿಂಗ್ ಬೆಂಗಳೂರಿನ ಸಿಟಿ ಸ್ಕೇಟ ರ್ಸ್ ಅರೇನಾ ಇಲ್ಲಿ ದಿನಾಂಕ 19 20,21 ಆಗಸ್ಟ್ 2022 ರಂದು ನಡೆದ ಮುಕ್ತ ರಾಜ್ಯ ಮಟ್ಟದ ಸ್ಕೇಟಿಂಗ್ (ಕ್ವಾರ್ಡ್ ವಿಭಾಗ )11 ರಿಂದ 14ವರ್ಷದ ವಿಭಾಗ ದ ಪಂದ್ಯದಲ್ಲಿ ನಿರ್ಮಯ್ ವೈ ಏನ್ ಇವರು ರಿಂಕ್ 1000 mts ಮತ್ತು 500ಡಿ ರಲ್ಲಿ 2ಬೆಳ್ಳಿ ಪದಕ ಹಾಗೂ ರೋಡ್ ರೇಸ್ 1500mts ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.

ಇವರು ಉರ್ವ ಹೊಯಿಗೆಬೈಲ್ ನಿವಾಸಿ ಯದುನಂದನ್ ಹಾಗೂ ವಿಜಯ ಲಕ್ಷೀ ದಂಪತಿ ಪುತ್ರನಾಗಿದ್ದು ಪ್ರಸ್ತುತ ಲೇಡಿಹಿಲ್ ಸಂತ ಅಲೋಶಿ ಯಸ್ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಮಂಗಳೂರಿನ ಎಫ್ ಡಿ ಎಸ್ ಸಿ ಯ ಹೈ ಫ್ಲೈಯೆರ್ಸ ಸ್ಸ್ಕೇಟಿಂಗ್ ಕ್ಲಬ್ ನ ಸದಸ್ಯರಾಗಿದ್ದು ತರಬೇತುಧಾರರಾದ ಶ್ರೀ ಜಯರಾಜ್, ಶ್ರೀ ಮೋಹನ್, ಶ್ರೀ ರಮಾನಂದ, ಶ್ರೀ ಹರ್ಷದ್ ಹುಸೇನ್ ಇವರಿಂದ ತರಬೇತು ಪಡೆಯುತ್ತಿದ್ದಾರೆ.