ಮೂಲ್ಕಿ : ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2021 22 ನೇ ಸಾಲಿನ ಸಾಮಾನ್ಯ ಸಭೆಯು ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪದ್ಮಿನಿ ವಿಜಯ್ ಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಹಾಲಿನ ಗುಣಮಟ್ಟ ಕಾಪಾಡುವುದರ ಜೊತೆಗೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಮಸ್ಯೆಗಳ ಬಗ್ಗೆ ವಿಜಯ್ ಕುಮಾರ್ , ಶಾಂತ ಶೆಟ್ಟಿ ಸುಕೇಶ್ ಶೆಟ್ಟಿ ವಿಠಲಶೆಟ್ಟಿ , ಸುಂದರ ಪೂಜಾರಿ ಮತ್ತಿತರರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್,
ಸಂಘದ ನಿರ್ದೇಶಕ ಪ್ರಫುಲ್ಲಾ ಶೆಟ್ಟಿ, ಶೋಭಾ ವಿ.ಶೆಟ್ಟಿ,ಲೀಲಾ ಎಸ್.ಶೆಟ್ಟಿ,ಶೋಭಾ ಎ.ಶೆಟ್ಟಿ,ಬೇಬಿ ಕೆ., ವನಿತಾ ವಿ ಶೆಟ್ಟಿ, ಗುಲಾಬಿ ಕೆ ಪೂಜಾರಿ, ವತ್ಸಲಾ ಶೆಟ್ಟಿ, ಕಾರ್ಯದರ್ಶಿ ಮಮತಾ ಅನಿಲ್ ಶೆಟ್ಟಿ, ಹಾಲು ಪರೀಕ್ಷೆಗೆ ತ್ರಿವೇಣಿ ದೇವಿ ಪ್ರಸಾದ್, ಸಹಾಯಕಿ ಶೋಭಾ ಬಿ ಶೆಟ್ಟಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘಕ್ಕೆ ಅತ್ಯಧಿಕ ಹಾಲು ಪೂರೈಕೆ ಮಾಡಿದ ನೆಲೆಯಲ್ಲಿ ವಿಜಯ ಆರ್ ಶೆಟ್ಟಿ (ಪ್ರ), ಹರಿಣಾಕ್ಷಿ ಪೂಜಾರಿ (ದ್ವಿ), ಶಶಿಕಲಾ ಎಚ್ (ತೃ) ರವರಿಗೆ ಬಹುಮಾನ ವಿತರಿಸಲಾಯಿತು

ಹಾಗೂ ಉತ್ತಮ ಗುಣಮಟ್ಟದ ಹಾಲು ಪೂರೈಕೆಗಾಗಿ ಸದಸ್ಯೆ ಲೀಲಾ ಎಸ್ ಶೆಟ್ಟಿ ರವರನ್ನು ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Leave a Reply

Your email address will not be published.