Monday, February 10, 2025
Homeಮಂಗಳೂರುಸಹಕಾರಿ ವ್ಯವಸಾಯಿಕ ಸಂಘ(ನಿ)ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ

ಸಹಕಾರಿ ವ್ಯವಸಾಯಿಕ ಸಂಘ(ನಿ)ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ

ಮುಲ್ಕಿ: ಹಳೆಯಂಗಡಿಯ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘ(ನಿ)ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಎಚ್.ನಾರಾಯಣ ಸನಿಲ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್. ಎಸ್.ಸತೀಶ್ ಭಟ್ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ ಸುಮಾರು 3 ಕೋಟಿ ಬಂಡವಾಳದ ಮೂಲಕ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣದ ಯೋಜನೆ ಇದೆ ಎಂದರು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ನಿರ್ದೇಶಕರಾದ ವಸಂತ್ ಬೆರ್ನಾಡ್,ವಿನೋದ್ ಕುಮಾರ್ ಬೊಳ್ಳೂರು, ಗೀತಾ ಆರ್ ಶೆಟ್ಟಿ,ಯೋಗೀಶ್ ಪಾವಂಜೆ,ಮೀರಾ ಬಾಯಿ,ಕೆ,ರೋಹಿಣಿ ಬಿ ಶೆಟ್ಟಿ,ಅಶೋಕ್ ಬಂಗೇರ,ಮುಖೇಶ್ ಸುವರ್ಣ,,ದಿವ್ಯ,ಶಂಕರ,ರಾಜೇಶ್ ಎಸ್.ದಾಸ್,ಕಿರಣ್ ಶೆಟ್ಟಿ,ಕಾರ್ಯನಿರ್ವಾಹಣಾಧಿಕಾರಿ ಹಿಮಕರ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಮಹಾಬಲ ಸಾಲ್ಯಾನ್, ವಾಹಿದ್ ತೋಕೂರು, ಅಬ್ದುಲ್ ಖಾದರ್, ಹ್ಯಾರಿಸ್ ನವರಂಗ್, ಧರ್ಮಾನಂದ ಶೆಟ್ಟಿಗಾರ್,, ಸುಗಂಧಿ ದಿನೇಶ್ ಕೊಂಡಾಣ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.
ಸಂಘದ ಕಾರ್ಯನಿರ್ವಣಾಧಿಕಾರಿ ಹಿಮಕರ್ ಸ್ವಾಗತಿಸಿದರು,ಉಪಕಾರ್ಯದರ್ಶಿ ಶ್ರೀಕಾಂತಿ ಧನ್ಯವಾದ ಅರ್ಪಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸತತ ಆರನೇ ಬಾರಿಗೆ ಜಿಲ್ಲಾ ಪ್ರೋತ್ಸಾಹಕರ ಪ್ರಶಸ್ತಿ ಪಡೆದ ಪಡುಪಣಂಬೂರು ವ್ಯವಸಾಯ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷರಾದ ಸತೀಶ್ ಭಟ್ ರವರನ್ನು ಗೌರವಿಸಲಾಯಿತು ಹಾಗೂ ಸಂಘದ ಸದಸ್ಯರಿಗೆ ಶೇ19 ಡಿವಿಡೆಂಟ್ ವಿತರಿಸಲಾಯಿತು

RELATED ARTICLES
- Advertisment -
Google search engine

Most Popular