ಆರೈವ ಸಿವಿಲ್ ಕ್ಲಬ್ ನ 2024-25 ನೇ ಸಾಲಿನ ಕಾರ್ಯಚಟುವಟಿಕೆ ಮತ್ತು ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0
118

ಎಸ್ ಎನ್ ಮೂಡಬಿದ್ರಿ ಪಾಲಿಟೆಕ್ನಿಕ್ ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆರೈವ ಸಿವಿಲ್ ಕ್ಲಬ್ ನ 2024-25 ನೇ ಸಾಲಿನ ಕಾರ್ಯಚಟುವಟಿಕೆಯನ್ನು ನಿಟ್ಟೆ ಸಂಸ್ಥೆಯಲ್ಲಿ ಸಂಶೋಧನಾರ್ಥಿಯು ಪಾಲಿಟೆಕ್ನಿಕ್ ನ ಪೂರ್ವ ಉಪನ್ಯಾಸಕರು ಆಗಿರುವ ರಮೇಶ್ ರಾವ್ ಬಿ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜೀವನದಲ್ಲಿ ದುಡ್ಡು, ಮದ, ಮಾತ್ಸರ್ಯಗಳನ್ನು ಬಿಟ್ಟು ಕೇವಲ ಜ್ಞಾನ ಭಂಡಾರವನ್ನು ಹೆಚ್ಚಿಸಿದರೆ ಔದ್ಯೋಗಿಕ, ವ್ಯಾವಹಾರಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು. ಹಾಗೆ ದ ಫ್ಯೂಚರ್ ಆಫ್ ಸಿವಿಲ್ ಇಂಜಿನಿಯರಿಂಗ್ ವಿಷಯದ ಕುರಿತು ಉಪನ್ಯಾಸ ನೀಡಿದರು. ನಂತರ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿತು.

ಆಟೋ ಮೊಬೈಲ್ ವಿಭಾಗ ಮುಖ್ಯಸ್ಥರಾದ ಆರ್ ಗಣೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಿವಿಲ್ ವಿಭಾಗ ಮುಖ್ಯಸ್ಥರಾದ ಗೋಪಾಲಕೃಷ್ಣ ಕೆ ಎಸ್, ಸಿವಿಲ್ ಕ್ಲಬ್ ಸಂಯೋಜಕರಾದ ಸುಪ್ರಿಯಾ ಎಸ್, ವಿಭಾಗದ ಹಿರಿಯ ವಿದ್ಯಾರ್ಥಿ ನಿತೇಶ್ ಎಸ್ ಪೂಜಾರಿ ಉಪಸ್ಥಿತರಿದ್ದರು.
ಅತಿಥಿಗಳನ್ನು ದೀಕ್ಷಾ ಸ್ವಾಗತಿಸಿ, ರಮಿತ್ ವಂದಿಸಿದರು. ಹರ್ಷಿತ ಅತಿಥಿ ಪರಿಚಯ ಮಾಡಿದರು. ರಕ್ಷಿತಾ ನಿರೂಪಿಸಿದರು.

LEAVE A REPLY

Please enter your comment!
Please enter your name here