ಮುಲ್ಕಿ: ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತ್ ನ 2024- 25 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಹಾಗೂ 2025- 26 ನೇ ಸಾಲಿನ ಕಾರ್ಮಿಕ ಸಮನ್ವಯ ತಯಾರಿಸಲು ನರೇಗಾ ಯೋಜನೆಯ ವಿಶೇಷ ಗ್ರಾಮ ಸಭೆ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಮಯ್ಯದ್ಧಿ ವಹಿಸಿ ಮಾತನಾಡಿ ಗ್ರಾಮದ ಅಭಿವೃದ್ಧಿ ಪಂಚಾಯತ್ ಉದ್ದೇಶವಾಗಿದ್ದು ಅಭಿವೃದ್ಧಿಗೆ ಸಹಕರಿಸಿ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ಲೀಲಾ ಕೃಷ್ಣಪ್ಪ,ಕೇಶವ ಪಂಜ, ರೇವತಿ ಶೆಟ್ಟಿಗಾರ್, ಮೆಲಿಟ ಡಿಸೋಜಾ, ಜಯಂತಿ ಶೆಟ್ಟಿ, ಜಾಕ್ಸನ್ ಸಲ್ದಾನ, ಮಾಲತಿ, ರಾಜೇಶ್ ಶೆಟ್ಟಿ ಸುಮಿತ್ರ,ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕೋ ಆರ್ಡಿನೇಟರ್ ಅನ್ವಯ, ನರೇಗಾ ಇಂಜಿನಿಯರ್ ರಿತೇಶ್, ಪಂಚಾಯತ್ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಹಾಗೂ ಭಾರತದ ಸಂವಿಧಾನ ರಚನೆಯಾದ ದಿನವನ್ನು ಆಚರಿಸಲಾಯಿತು.