Wednesday, July 24, 2024
Homeಅಪರಾಧಬೆಳ್ತಂಗಡಿ | ವಿವಾದಿತ ಜಮೀನಿನ ಗೇಟಿನಲ್ಲಿ 25 ಮೇಕೆ ಕಡಿದು, ತಲೆಗಳಿಗೆ ಫೋಟೊ ಹಾಕಿ ವಿಕೃತಿ;...

ಬೆಳ್ತಂಗಡಿ | ವಿವಾದಿತ ಜಮೀನಿನ ಗೇಟಿನಲ್ಲಿ 25 ಮೇಕೆ ಕಡಿದು, ತಲೆಗಳಿಗೆ ಫೋಟೊ ಹಾಕಿ ವಿಕೃತಿ; ವಾಮಾಚಾರದ ಶಂಕೆ

ಬೆಳ್ತಂಗಡಿ: ಜಾಗಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ನಡುವೆ ಕೆಲವು ವರ್ಷಗಳಿಂದ ವಿವಾದ ನಡೆಯುತ್ತಿದ್ದ ಜಮೀನಿನ ಗೇಟಿನ ಬಳಿ ಸುಮಾರು 25 ಮೇಕೆ ತಲೆ ಕಡಿದು, ಅದಕ್ಕೆ 25 ಮಂದಿಯ ಫೋಟೊ ಇಟ್ಟು ವಾಮಾಚಾರ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ. ಸೋಮವಾರ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಪಡಂಗಡಿ ಗ್ರಾದ ಬೊಳಿಯಾರ್‌ ಎಂಬಲ್ಲಿ 25 ಎಕರೆ ಜಾಗವನ್ನು ಕೇರಳ ಮೂಲದ ಗೋಪಾ ಕುಮಾರ್‌ ಮತ್ತು ಸುಮೇಶ್‌ ಎಂಬವರಿಂದ ಮಂಗಳೂರು ವೈಷ್ಣವಿ ಟ್ರಾನ್ಸ್‌ಪೋರ್ಟ್‌ ಮಾಲೀಕ ರಾಜೇಶ್‌ ಪ್ರಭು ಎಂಬಾತ ಖರೀದಿ ಮಾಡಿ ಜಾಗದ ಬೆಲೆ 8 ಕೋಟಿ ರೂ. ಖರೀದಿಸದೆ ವಂಚಿಸಿದ್ದನೆನ್ನಲಾಗಿದೆ. ಈ ಬಗ್ಗೆ ಗೋಪಾ ಕುಮಾರ್‌ ಮತ್ತು ಸುಮೇಶ್‌ ಬೆಳ್ತಂಗಡಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ನ್ಯಾಯಾಲಯವು ಜಾಗವನ್ನು ಗೋಪಾ ಕುಮಾರ್‌ ಮತ್ತು ಸುಮೇಶ್‌ ವಶಕ್ಕೆ ನೀಡಿತ್ತು. ಇದೀಗ ಜಾಗ ಪ್ರವೇಶ ಮಾಡುವ ಗೇಟಿನ ಮುಂದೆ 25 ಮೇಕೆ ತಲೆ ಕಡಿದು, 25 ಮಂದಿಯ ಫೋಟೊ ಹಾಕಲಾಗಿದೆ. ಜಾಗ ಖರೀದಿ ಮಾಡಿ ಹಣ ಕೊಡದೆ ವಂಚಿಸಿರುವ ಪ್ರಭಾವಿ ವ್ಯಕ್ತಿ ರಾಜೇಶ್‌ ಪ್ರಭು ಈ ವಾಮಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಬಂದು ಪರಿಶೀಲಿಸಿದ್ದಾರೆ.

RELATED ARTICLES
- Advertisment -
Google search engine

Most Popular