ಮೊಗ್ರು : ಮೊಗ್ರು ಗ್ರಾಮದ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ -ಮುಗೇರಡ್ಕ ಇದರ 25 ನೇ ವರ್ಷದ ಪ್ರಯುಕ್ತ ಬೆಳ್ಳಿಹಬ್ಬದ ಆಚರಣೆಯ ಬಗ್ಗೆ ಸಮಾಲೋಚನ ಸಭೆ ಅಲೆಕ್ಕಿ ಶಿಶುಮಂದಿರದಲ್ಲಿ ನಡೆಯಿತು.
ಈ ಸಭೆಯಲ್ಲಿ ಬೆಳ್ಳಿಹಬ್ಬ ಆಚರಣೆಯನ್ನು ದಿನಾಂಕ 15,16,17 ನೇ ಫೆಬ್ರವರಿ 2025ರಂದು 3 ದಿನ ನಡೆಸುವುದೆಂದು ತೀರ್ಮಾನಿಸಲಾಯಿತು, ಮತ್ತು ಕಾರ್ಯಕ್ರಮಗಳ ರೂಪುರೆಷೇಗಳ ಬಗ್ಗೆ ಚರ್ಚಿಸಲಾಯಿತು, ಬೆಳ್ಳಿ ಹಬ್ಬದ ಆಚರಣಾ ಸಮಿತಿ ರಚನೆ ಮಾಡಲಾಯಿತು. ಸಂಚಾಲಕರಾಗಿ ಬಾಲಕೃಷ್ಣ ಗೌಡ ಮುಗೇರಡ್ಕ, ಅಧ್ಯಕ್ಷರಾಗಿ ಭರತೇಶ್ ಪುನ್ಕೆದಡಿ, ಉಪಾಧ್ಯಕ್ಷರಾಗಿ ಪ್ರವೀಣ್ ಗೌಡ ಮತ್ತಿಲಾರು, ಬಾಲಕೃಷ್ಣ ಗೌಡ ಅಲೆಕ್ಕಿ, ಕಾಂತಪ್ಪ ಗೌಡ ಅಲೆಕ್ಕಿ, ಕಾರ್ಯದರ್ಶಿಯಾಗಿ ದೀಕ್ಷಿತ್ ಗೌಡ ಎರ್ಮಲ, ಜೊತೆ ಕಾರ್ಯದರ್ಶಿಯಾಗಿ ನಿತಿನ್ ಮುಂಡಾಜೆ, ಬಾಲಕೃಷ್ಣ ಗೌಡ ಬರುಂಗುಡೆಲ್ , ಕೋಶಾಧಿಕಾರಿಯಾಗಿ ಜಗದೀಶ್ ಗೌಡ ಅರ್ಬಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನಾ ಗೌರವಾಧ್ಯಕ್ಷರದ ಉದಯ ಭಟ್ ಅಲೆಕ್ಕಿ, ಅಧ್ಯಕ್ಷರಾದ ರಮೇಶ್ ಎನ್ ನೆಕ್ಕರಾಜೆ, ಉಪಾಧ್ಯಕ್ಷರಾದ ಸುದರ್ಶನ್ ಗೌಡ ಅಲೆಕ್ಕಿ, ಕೇಶವ ಮತ್ತಿಲಾರು, ಕಾರ್ಯದರ್ಶಿಯಾದ ನೇಮಿಚಂದ್ರ ಮುಗೇರಡ್ಕ, ಜೊತೆ ಕಾರ್ಯದರ್ಶಿಗಳಾದ ವರುಣ್ ನೆಕ್ಕರಾಜೆ, ಮಹೇಶ್ ಅರ್ಬಿ, ಕೋಶಾಧಿಕಾರಿಯಾದ ಸುಧಾಕರ ಪುನ್ಕೆದಡಿ, ಸಂಚಾಲಕರಾದ ಅಶೋಕ್ ಬರುoಗುಡೆಲು,ನಾಗೇಶ್ ಉಪ್ಪ ಹಾಗೂ ಕ್ಲಬ್ ನಾ ಸರ್ವಸದಸ್ಯರು ಉಪಸ್ಥಿತರಿದ್ದರು. ನೇಮಿಚಂದ್ರ ಸ್ವಾಗತಿಸಿದರು, ಅಶೋಕ್ ಗೌಡ ವಂದನಾರ್ಪಣೆ ಸಲ್ಲಿಸಿದರು.