ಉಡುಪಿ: ಜಿಲ್ಲಾ ಮಲೆಕುಡಿಯ ಸಂಘ(ರಿ)| ಉಡುಪಿ ಇದರ ಸಮುದಾಯ ಭವನ ಉದ್ಘಾಟನೆ ಹಾಗೂ
ದಶಮಾನೊತ್ಸವ ಪ್ರಯುಕ್ತ ಸ್ವಜಾತಿ ಬಾಂಧವರ ಮುಕ್ತ ಕ್ರೀಡೋತ್ಸವ ಅಂಗವಾಗಿ ಉಡುಪಿ ಜಿಲ್ಲಾ ಮಟ್ಟದ ಅಥ್ಲೇಟಿಕ್ಸ್ ಚಾಂಪಿಯನ್ ಶಿಪ್ ಟೂರ್ನಮೆಂಟ್-2022 ನವೆಂಬರ್ 27 ರಂದು ಆದಿತ್ಯವಾರ ಬೆಳ್ಳಿಗ್ಗೆ 8.30ಕ್ಕೆ ಸ.ಹಿ.ಪ್ರಾ. ಶಾಲೆ ಕೂಡಬೆಟ್ಟು ಮಾಳ ಕಾರ್ಕಳದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರಿ ಸಂಘ, ಮಾಳ ಇದರ ಅಧ್ಯಕ್ಷರು, ಹಾಗೂ ಗ್ರಮ ಪಂಚಾಯತ್ ಮಾಳ ಇದರ ಮಾಜಿ ಅಧ್ಯಕ್ಷರಾದ ಹರಿಶ್ಚಂದ್ರ ತೆಂಡೂಲ್ಕರ್ ಇವರು ನಡೆಸಲಿದ್ದಾರೆ. ಜಿಲ್ಲಾ ಮಲೆಕುಡಿಯ ಸಂಘ(ರಿ) ಉಡುಪಿ ಇದರ ಉಪಾಧ್ಯಕ್ಷರಾದ ಗೀತಾ ಕಬ್ಬಿನಾಲೆ ಇವರು ಅದ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೃಷ್ಣ ಮೊಯಿಲಿ, ಡೀಕಯ್ಯ ಗೌಡ ಕನ್ಯಾಲು, ಎಲ್ಯಣ್ಣ ಮಲೆಕುಡಿಯ, ಡಮ್ ವೀರೇಶ್ವರ ಜೋಶಿ, ವಿಶ್ವನಾಥ ಕೋಟ್ಯಾನ್, ಸಂಜೀವ ಕುಲ್ಲಾಜೆ, ಸುಂದರ ಗೌಡ, ಲಕ್ಷ್ಮಣ ನೆರಿಯ, ರಾಮಣ್ಣ ಕನ್ಯಾನ, ಜಯಾನಂದ ಸವಣಾಲು ರಾಜು ಗೌಡ ಎನ್. ಪಾಲ್ಗೋಳಲಿದ್ದಾರೆ.