ಕಿನ್ನಿಗೋಳಿ : ನವೀನ್ ಕುಮಾರ್ ಕೊಡೆತೂರು ರವರ ಸಂಚಾಲಕತ್ವದ ನಟರಾಜ ನೃತ್ಯ ಹಾಗೂ ನೃತ್ಯ ರೂಪಕ ಕಲಾತಂಡ ಕಟೀಲು ಇದರ 2 ನೇ ವರ್ಷದ ಬೇಸಿಗೆ ಶಿಬಿರದಲ್ಲಿ ಚಿತ್ರಕಲಾ ಹಾಗೂ ನೃತ್ಯ ತರಬೇತಿಯನ್ನು ಕಟೀಲು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಒಂದನೇ ಮಹಡಿಯಲ್ಲಿ ನೀಡುತ್ತಿದ್ದರು. ಅದರ ಸಮಾರೋಪ ಸಮಾರಂಭ ಮೇ 12 ಭಾನುವಾರದಂದು ನಡೆಯಿತು. ಸಭಾ ಆರಂಭದಲ್ಲಿ ಶಿಬಿರದ ಶಿಕ್ಷಕರಾದ ನವೀನ್ ಕುಮಾರ್ ಕೊಡೆತೂರು ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟೀಲು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರರಾದ ಅಮೂಲ್ಯ ಯು ಶೆಟ್ಟಿ ವಹಿಸಿ ಮಾತನಾಡಿದರು. ಮೂರ್ತಿ ಕಲಾಕಾರರು ಮತ್ತು ಚಿತ್ರಕಲಾಕಾರರಾದ ಸದಾಶಿವ ಕುದ್ರಿಪದವು ಹಿತವಚನ ನುಡಿದರು. ಅತಿಥಿ ಗಣ್ಯರಾಗಿ ತಾರನಾಥ ಶೆಟ್ಟಿ ಭಂಡಾರ ಮನೆ, ಜಗದೀಶ್ ಪೂಜಾರಿ ತೇಜಸ್ ಬೇಕರಿ ಕಿನ್ನಿಗೋಳಿ ಇವರು ತರಬೇತಿ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದರು. ಮಕ್ಕಳು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾತ್ಯಾಯಿನಿ ತಾರನಾಥ ಶೆಟ್ಟಿ ನಿರೂಪಿಸಿ ವಂದಿಸಿದರು.