ಪಾಟ್ನಾ: ಬಿಹಾರದ ಪಾಟ್ನಾ ರೈಲು ನಿಲ್ದಾಣದ ಡಿಜಿಟಲ್ ಪರದೆಯ ಮೇಲೆ ಪೋರ್ನ್ ಕ್ಲಿಪ್ ಯೊಂದು 3ನಿಮಿಷಗಳ ಕಾಲ ಪ್ರಸಾರವಾಗಿ ರೈಲು ಅಧಿಕಾರಿಗಳು ಭಾರೀ ಪೇಚಿಗೆ ಸಿಲುಕಿದ ಪ್ರಸಂಗ ನಡೆದಿದೆ.
ಭಾನುವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಈ ದೃಶ್ಯ ರೈಲ್ವೆಯವರ ಎಲ್ ಇಡಿ ತೆರೆಯಲ್ಲಿ ಕಾಣಿಸಿಕೊಂಡಿದ್ದು, ಜಾಹೀರಾತು ಟಿವಿಯಲ್ಲಿ ಅಲ್ಲ ಎನ್ನುವುದು ವಿಶೇಷ. ಮೂರು ನಿಮಿಷಗಳ ಈ ಲೈಂಗಿಕ ಕ್ರಿಯೆಯ ದೃಶ್ಯವನ್ನು ಯುವಕರು ತಮ್ಮ ಮೊಬೈಲ್ ಫೋನ್ ಗಳಿಂದ ಶೂಟ್ ಮಾಡಿಕೊಂಡಿದ್ದಾರೆ.
ಹಲವರು ರೈಲು ನಿಲ್ದಾಣದಲ್ಲಿ ಪ್ರತಿಭಟಿಸಿದರು, ರೈಲು ರಕ್ಷಣಾ ಪಡೆಯವರು ಹಾಜರಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು.
ಇದು ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರದ ರೈಲು ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ. ಇದರ ನಿರ್ವಹಣೆ ಹೊತ್ತ ಏಜೆನ್ಸಿ ಮೇಲೆ ಎಫ್’ಐಆರ್ ದಾಖಲಿಸಲಾಗಿದೆ.