Sunday, July 14, 2024
Homeನಿಧನನಾಗರಹಾವು ಕಚ್ಚಿ 3 ವರ್ಷದ ಬಾಲಕ ಸಾವು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

ನಾಗರಹಾವು ಕಚ್ಚಿ 3 ವರ್ಷದ ಬಾಲಕ ಸಾವು, ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

ಚಿಕ್ಕಬಳ್ಳಾಪುರ : ನಾಗರಹಾವು ಕಚ್ಚಿ 3 ವರ್ಷದ ಬಾಲಕ ಮೃತಪಟ್ಟ ಘಟನೆ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ. ಮನೆಯ ಮುಂದೆ ರಾತ್ರಿ ಮಲಗಿದ್ದಾಗ ನಾಗರಹಾವು ಕಚ್ಚಿ ದೀಕ್ಷಿತ್(3) ಮೃತಪಟ್ಟಿದ್ದಾನೆ. ಸೂಕ್ತ ಸಮಯದಲ್ಲಿ ಬಾಗೇಪಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೊಮ್ಮಣ್ಣ ಸ್ಪಂದಿಸಿಲ್ಲ. ನಿರ್ಲಕ್ಷ್ಯ ತೋರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಾಲತಿ ಹಾಘೂ ಸುರೇಶ್ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಮುಂದೆ ಕಾಪೌಂಡ್​ನಲ್ಲಿ ಮಲಗಿದ್ದಾಗ ರಾತ್ರಿ ನಾಗರಹಾವು ಕಚ್ಚಿದೆ. ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular