Saturday, January 18, 2025
HomeUncategorizedಮೊಬೈಲ್ ನಲ್ಲಿ ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ..!

ಮೊಬೈಲ್ ನಲ್ಲಿ ವಿಡಿಯೋ ನೋಡಿ 9 ವರ್ಷದ ಬಾಲಕನಿಂದ 3 ವರ್ಷದ ಮಗು ಮೇಲೆ ಅತ್ಯಾಚಾರ..!


ಪುಣೆ: ಆಘಾತಕಾರಿ ಘಟನೆಯೊಂದರಲ್ಲಿ, ಸಾಮಾಜಿಕ ಮಾಧ್ಯಮದ ಪ್ರಭಾವದಿಂದ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ 9 ವರ್ಷದ ಬಾಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಡಿಸೆಂಬರ್ 15ರಂದು ಈ ಘಟನೆ ನಡೆದಿದೆ. ಈ ಆರೋಪದ ಮೇಲೆ 9 ವರ್ಷದ ಬಾಲಕನನ್ನು ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಾಲಕನನ್ನು ಜುವೆನೈಲ್ ಜಸ್ಟೀಸ್ ಬೋರ್ಡ್ (ಜೆಜೆಬಿ) ಮುಂದೆ ಹಾಜರುಪಡಿಸಲಾಯಿತು. ಆ ಕೋರ್ಟ್​ ಅವನಿಗೆ ಜಾಮೀನು ನೀಡಿತು. ಆತನನ್ನು ಅವನ ಹೆತ್ತವರ ಜೊತೆ ಕಳುಹಿಸಿತು.

ಪುಣೆಯಲ್ಲಿ ಒಂದೇ ಏರಿಯಾದಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದ ಹುಡುಗ ಮತ್ತು ಮಗುವಿನ ಕುಟುಂಬಗಳು ಆಪ್ತ ಸಂಬಂಧ ಹೊಂದಿದ್ದವು. ಎರಡೂ ಮನೆಯವರು ಪರಸ್ಪರರ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಇಬ್ಬರೂ ಮನೆಯ ಹೊರಗೆ ಆಟವಾಡುತ್ತಿದ್ದರು.
ಆ ಹೆಣ್ಣು ಮಗು ತನ್ನ ಮನೆಯ ಬಳಿ ಒಬ್ಬಳೇ ಇದ್ದಾಗ ಲೈಂಗಿಕ ದೌರ್ಜನ್ಯ ನಡೆದಿದ್ದು, ಆಕೆ ತನ್ನ ತಾಯಿಗೆ ತಿಳಿಸಿದಾಗ ವಿಷಯ ಬೆಳಕಿಗೆ ಬಂದಿದೆ. ತಾಯಿ ಪೊಲೀಸರಿಗೆ ಮಾಹಿತಿ ನೀಡಿದರು. 3ನೇ ತರಗತಿಯ ಬಾಲಕನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಹಲ್ಲೆಗೆ ಸಂಬಂಧಿಸಿದ ಕೇಸ್ ದಾಖಲಿಸಲಾಗಿದೆ. ಆತ ಸೋಷಿಯಲ್ ಮೀಡಿಯಾದ ಪ್ರಭಾವದಿಂದ ಈ ರೀತಿ ಮಾಡಿರುವುದಾಗಿ ಒಪ್ಪಿಕೊಮಡಿದ್ದಾನೆ.

RELATED ARTICLES
- Advertisment -
Google search engine

Most Popular