Sunday, July 14, 2024
Homeರಾಷ್ಟ್ರೀಯಕೇವಲ 6 ಗಂಟೆಯಲ್ಲಿ 300 ಮಿ.ಮೀ. ಮಳೆ: ಅಕ್ಷರಶಃ ಮುಳುಗಿದ ಮುಂಬೈ!

ಕೇವಲ 6 ಗಂಟೆಯಲ್ಲಿ 300 ಮಿ.ಮೀ. ಮಳೆ: ಅಕ್ಷರಶಃ ಮುಳುಗಿದ ಮುಂಬೈ!

ಮುಂಬೈ: ವಾಣಿಜ್ಯ ರಾಜಧಾನಿ ಮುಂಬೈ ಭಾರೀ ಮಳೆಗೆ ತತ್ತರಿಸಿದೆ. ಕಳೆದ ರಾತ್ರಿ 1 ಗಂಟೆಯಿಂದ 7 ಗಂಟೆ ವರೆಗಿನ ಕೇವಲ ಆರು ಗಂಟೆ ಅವಧಿಯಲ್ಲಿ ಬರೋಬ್ಬರಿ 300 ಮಿ.ಮೀ. ಮಳೆಯಾಗಿ ಮುಂಬೈ ಅಕ್ಷರಶಃ ಮುಳುಗಿದಂತಾಗಿದೆ.
ಮಹಾಮಳೆಯಿಂದಾಗಿ ನಗರದ ಹಲವೆಡೆ ಜಲಾವೃತಗೊಂಡಿದೆ. ಹೀಗಾಗಿ 50ಕ್ಕೂ ಹೆಚ್ಚು ವಿಮಾನಗಳ ಸೇವೆ ರದ್ದಾಗಿದೆ. ರೈಲು ಸೇವೆಯಲ್ಲೂ ವ್ಯತ್ಯಯವಾಗಿದೆ.
ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಫ್ಲೈಟ್‌ ಸ್ಟೇಟಸ್‌ ಚೆಕ್‌ ಮಾಡುವಂತೆ ಪ್ರಯಾಣಿಕರಲ್ಲಿ ವಿನಂತಿಸಿದೆ. ಹಲವು ರಸ್ತೆಗಳಲ್ಲಿ ಸೊಂಟದವರೆಗೂ ನೀರು ನಿಂತು ವಾಹನಗಳು ಪ್ರಯಾಣಿಸದಂತಾಗಿದೆ. ಮುಂಬೈ ನಗರದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಸಬ್‌ ಅರ್ಬನ್‌ ರೈಲು ಸಂಚಾರಕ್ಕೆ ಸಮಸ್ಯೆಯಾಗಿದೆ. ರೈಲ್ವೆ ಹಳಿಗಳೂ ನೀರಿನಲ್ಲಿ ಮುಳುಗಿವೆ. ಹಲವು ರೈಲುಗಳು ರದ್ದುಗೊಂಡಿವೆ. ಇಂದೂ ಮಳೆ ಮುಂದುವರಿಯಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ.

TIMES NOW on X: “Commuters wade through waterlogged streets at King’s Circle in rain-hit Mumbai. #Mumbai #Maharashtra https://t.co/rIT3Bll5BU” / X

ANI on X: “#WATCH | Severely waterlogged streets and railway track in Chunabhatti area of Mumbai, as the city is marred by heavy rains https://t.co/qdxk6yi8Hb” / X

RELATED ARTICLES
- Advertisment -
Google search engine

Most Popular