Monday, January 20, 2025
Homeದಾವಣಗೆರೆದಾವಣಗೆರೆ ಅರಣ್ಯ ವಲಯದಲ್ಲಿ 32 ಜೀವಂತ ನಾಡಬಾಂಬ್ ಪತ್ತೆ: ಇಬ್ಬರು ಆರೋಪಿ ಬಂಧನ

ದಾವಣಗೆರೆ ಅರಣ್ಯ ವಲಯದಲ್ಲಿ 32 ಜೀವಂತ ನಾಡಬಾಂಬ್ ಪತ್ತೆ: ಇಬ್ಬರು ಆರೋಪಿ ಬಂಧನ

ದಾವಣಗೆರೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ವಲಯದಲ್ಲಿ 32 ಜೀವಂತ ನಾಡಬಾಂಬ್​ಗಳು ಪತ್ತೆಯಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಬರ್ಕತ್ ಅವರು ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ನಾಡಬಾಂಬ್ ಪತ್ತೆ ಆಗಿದೆ. ಕಾಡು ಪ್ರಾಣಿಗಳ ಬೇಟೆಗಾಗಿ ನಾಲ್ವರು ದುಷ್ಕರ್ಮಿಗಳು ನಾಡಬಾಂಬ್​ ಇಟ್ಟಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಂಡು ಎರಡು ಬೈಕ್ ಬಿಟ್ಟು ನಾಲ್ವರು ಪರಾರಿ ಆಗಿದ್ದಾರೆ.
ಗಸ್ತು ತಿರುಗುತ್ತಿದ್ದಾಗ ರಸ್ತೆ ಬದಿ ಎರಡು ಬೈಕ್​ಗಳನ್ನು ಅರಣ್ಯ ಸಿಬ್ಬಂದಿ ನೋಡಿ, ಅನುಮಾನಗೊಂಡು ಕಾಡಿನೊಳಗೆ ಹೋದಾಗ ಬಾಂಬ್ ಇಡಲು ನಾಲ್ವರು ಸ್ಕೆಚ್ ಹಾಕಿರುವುದು ತಿಳಿದುಬಂದಿದೆ.
ಬಾಂಬ್ ಇಡಲು ಬಂದಿದ್ದ ನಾಲ್ವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಮಾದಾಪುರ ಗ್ರಾಮದ ತಿಮ್ಮಪ್ಪ ಮತ್ತು ಗುಡ್ಡಪ್ಪ ಎಂದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಜೈಲಿಗೆ ಕಳುಹಿಸಿದ್ದಾರೆ. ಇನ್ನು ಉಳಿದ ಇಬ್ಬರ ಮಾಹಿತಿಯನ್ನು ನ್ಯಾಮತಿ ಪೊಲೀಸರು ಕಲೆ ಹಾಕುತ್ತಿದ್ದಾರೆ.

RELATED ARTICLES
- Advertisment -
Google search engine

Most Popular