Saturday, December 14, 2024
HomeUncategorizedಕಾರು ಚಾಲಕನ ಹುಚ್ಚಾಟಕ್ಕೆ 35 ಮಂದಿ ಸಾವು, 43 ಮಂದಿಗೆ ಗಾಯ

ಕಾರು ಚಾಲಕನ ಹುಚ್ಚಾಟಕ್ಕೆ 35 ಮಂದಿ ಸಾವು, 43 ಮಂದಿಗೆ ಗಾಯ


62 ವರ್ಷದ ವ್ಯಕ್ತಿಯೊಬ್ಬರು ಜನರ ಗುಂಪಿನ ಮೇಲೆ ಕಾರು ಚಲಾಯಿಸಿದ ಪರಿಣಾಮ 35 ಮಂದಿ ಮೃತಪಟ್ಟು, 43 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೀನಾದ ಝುಹೈ ನಗರದಲ್ಲಿ ನಡೆದಿದೆ.
ನವೆಂಬರ್​ 11 ಸಂಜೆ 7:48ರ ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಸಂಕೀರ್ಣ ಒಂದರ ಮುಂಭಾಗ ಜನರು ವ್ಯಾಯಾಮ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಘಟನೆ ಸಂಬಂಧ 62 ವರ್ಷದ ಚಾಲಕನನ್ನು ಬಂಧಿಸಲಾಗಿದೆ.
ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (CPLA) ಆಯೋಜಿಸಿದ್ದ ಝುಹೈ ಏರ್‌ಶೋ ಕಾರ್ಯಕ್ರಮ ನಡೆಯುವ ಮುನ್ನಾ ದಿನ ಈ ಘಟನೆ ನಡೆದಿದ್ದು, ದು ಅಪಘಾತವೋ ಅಥವಾ ದಾಳಿಯೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆ ನಡೆದಾಗ ಕಾರಿನ ಚಾಲಕ ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಟ್ವೀಟ್​ ಮಾಡಿರುವ ಚೀನಾ ಅಧ್ಯಕ್ಷ, ಕಾರು ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜತೆಗೆ, ಅಪರಾಧಿಯನ್ನು ಕಾನೂನಿನ ಪ್ರಕಾರ ಶಿಕ್ಷಿಸಬೇಕೆಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಘಟನಾ ಸ್ಥಳದಲ್ಲಿ ಜನರು ಸಹಾಯಕ್ಕಾಗಿ ಅಂಗಲಾಚುತ್ತಿರುವ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಸೋಮವಾರ ರಾತ್ರಿಯಿಂದಲೇ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ನಂತರ ಮುಂದಿನ ಸೂಚನೆ ಬರುವವರೆಗೆ ವ್ಯಾಯಾಮ ಕೇಂದ್ರವನ್ನು ಬಂದ್‌ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular