Sunday, July 14, 2024
Homeಉಡುಪಿಉಡುಪಿ:ಎಬಿವಿಪಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ವರ್ಧಂತಿ ಕಾರ್ಯಕ್ರಮ

ಉಡುಪಿ:ಎಬಿವಿಪಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ವರ್ಧಂತಿ ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಮಹೋತ್ಸವದ 350ನೇ ವರ್ಧಂತಿಯಂದು ನಗರದ ವಿವಿಧ ವಿದ್ಯಾರ್ಥಿ ನಿಲಯದಲ್ಲಿ ವಿಶೇಷ ಉಪನ್ಯಾಸ ಮತ್ತು ಪುಷ್ಪಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಎಂಜಿಎಂ ಕಾಲೇಜಿನ ವಿದ್ಯಾರ್ಥಿನಿ ನಿಲಯದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಉಡುಪಿ ನಗರ ಕಾರ್ಯದರ್ಶಿ ಶ್ರೀವತ್ಸ ಡಿ ಗಾಂವ್ಸ್‌ಕರ್ ಇಂದಿನ ದಿನ ಪ್ರಪಂಚದ ಬಲಿಷ್ಠ ನೌಕಾದಳಗಳಲ್ಲಿ ಭಾರತವು ಇದೆ ಎಂದರೆ ಅದಕ್ಕೆ ಮುಖ್ಯ ಕಾರಣ ಶಿವಾಜಿ ಮಹಾರಾಜರು. ಅಂದಿನ ಸಂದರ್ಭದಲ್ಲಿ ಪೋರ್ಚುಗಿಸರನ್ನು ಎದುರಿಸಲು ನೌಕಾದಳದ ಅವಶ್ಯಕತೆಯನ್ನು ಅರಿತ ಇವರು ನೌಕದಳಕ್ಕೆ ಅತ್ಯಂತ ಮಹತ್ವವನ್ನು ನೀಡಿ ಇಂಡಿಯಾನಾ ದಿನ ಭಾರತೀಯ ನೌಕಾದಳದ ಪಿತಾಮಹ ಎಂದೇ ಕರೆಸಿಕೊಂಡಿದ್ದಾರೆ. ಅಲ್ಲದೆ ಇವರು ಸಣ್ಣ ಸೈನ್ಯಗಳಿಂದ ಗೆರಿಲ್ಲಾ ಮಾದರಿಯ ವಿಶೇಷ ಯುದ್ಧ ತಂತ್ರಗಳ ಮೂಲಕ ಅತ್ಯಂತ ಬಲಿಷ್ಠ ಪರಕೀಯ ಸೈನ್ಯಗಳನ್ನು ಬಗ್ಗು ಬಡಿದಿದ್ದಾರೆ. ಯುದ್ಧ ಮಾತ್ರವಲ್ಲದೆ ಅತ್ಯುತ್ತಮ ಆಡಳಿತಗಾರ ಇವರು ರೈತರು, ಬಡವರು ಮತ್ತು ಸಮಾಜದ ಎಲ್ಲಾ ವರ್ಗದವರಿಗೆ ಸಮಾನವಾಗಿ ಕಂಡಿದ್ದಾರೆ ಮತ್ತು ಕಲೆ, ಸಂಸ್ಕೃತಿ, ಸಾಹಿತ್ಯ, ಹೀಗೆ ಸರ್ವತೋಮುಖ ಅಭಿವೃದ್ಧಿಗೆ ಮಹತ್ವ ನೀಡಿದರು ಎಂದರು. ಚಾಣಾಕ್ಷತೆಯಿಂದ ಔರಂಗಜೇಬನ ಆಸ್ಥಾನದಿಂದ ಹೊರಬಂದ ಇವರು ಕಾಶಿಯ 350 ವರ್ಷಗಳ ಹಿಂದೆ 1674ರಲ್ಲಿ 44ನೇ ವಯಸ್ಸಿಗೆ ಗಾಗಭಟ್ಟರಿಂದ ಶಾಸ್ಟ್ರೋಕ್ತವಾಗಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾಗುತ್ತದೆ ಮತ್ತು ರಾಯಗಧವನ್ನು ಹೊಸ ರಾಜಧಾನಿಯನ್ನಾಗಿ ಘೋಷಿಸುತ್ತಾರೆ ಮತ್ತು ಸ್ವಾತಂತ್ರ್ಯ ಹಿಂದೂ ಚಕ್ರವರ್ತಿ ಬಿರುದನ್ನು ತನ್ನಾದಾಗಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ವಿವಿಧ ಕಡೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಬಿವಿಪಿ ತಾಲೂಕು ಸಂಚಾಲಕರಾದ ಅಜಿತ್ ಜೋಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಸಂಹಿತಾ ಕೆ. ನಗರ ಹಾಸ್ಟೆಲ್ ಪ್ರಮುಖರಾದ ನವೀನ್ ಸಹ ಪ್ರಮುಖರಾದ ಧನ್ಯ ಮತ್ತು ಕಾರ್ಯಕಾರಿಣಿ ಸದಸ್ಯರಾದ ನಾಗರತ್ನ ಹಾಗೂ ಲ್ಯಾರಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular