Tuesday, June 18, 2024
Homeಅಪಘಾತಉಳ್ಳಾಲ | ನಾಲ್ವರು ಮಹಿಳೆಯರು ಸಮುದ್ರಪಾಲು; ಮೂವರ ರಕ್ಷಣೆ; ಒಬ್ಬಾಕೆ ಸಾವು

ಉಳ್ಳಾಲ | ನಾಲ್ವರು ಮಹಿಳೆಯರು ಸಮುದ್ರಪಾಲು; ಮೂವರ ರಕ್ಷಣೆ; ಒಬ್ಬಾಕೆ ಸಾವು

ಉಳ್ಳಾಲ: ಇಲ್ಲಿನ ಸಮುದ್ರ ತೀರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಆಂಧ್ರ ಪ್ರದೇಶ ಮೂಲದ ನಾಲ್ವರು ಮಹಿಳೆಯರಲ್ಲಿ ಒಬ್ಬರು ಸಮುದ್ರಪಾಲಾಗಿದ್ದು, ಉಳಿದವರನ್ನು ರಕ್ಷಿಸಲಾಗಿದೆ.
ಆಂದ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್.‌ ಪ್ರಸನ್ನ ಎಂಬವರ ಪತ್ನಿ ಪರಿಮಿ ರತ್ನ ಕುಮಾರಿ (57) ಮೃತಪಟ್ಟವರು. ಉಳ್ಳಾಲ ಕಡಲತೀರದಲ್ಲಿ ಮಹಿಳೆಯರಿದ್ದಾಗ ದೊಡ್ಡ ಗಾತ್ರದ ಅಲೆಯೊಂದು ಅಪ್ಪಳಿಸಿ ಮಹಿಳೆಯರನ್ನು ನೀರಿಗೆ ಎಳೆದೊಯ್ದಿತ್ತು. ಸ್ಥಳೀಯರು ತಕ್ಷಣ ನಾಲ್ವರನ್ನು ಹೊರಗೆಳೆದು ರಕ್ಷಿಸಿದ್ದಾರೆ. ಅವರಲ್ಲಿ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದು, ತಕ್ಷಣ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ.ಐವರು ಮಹಿಳೆಯರು ಹೈದರಾಬಾದ್‌ನಿಂದ ಜೂ.6ಕ್ಕೆ ಮೈಸೂರಿಗೆ ಬಂದಿದ್ದರು. ಅಲ್ಲಿ ಪ್ರವಾಸ ಮುಗಿಸಿ ಜೂ. 7ಕ್ಕೆ ಕೊಡಗಿಗೆ ಹೋಗಿ, ಜೂ. 9ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ ನಂತರ ಉಳ್ಳಾಲ ಸಮುದ್ರ ತೀರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular