Saturday, June 14, 2025
Homeಮಂಗಳೂರುಎಲ್ ಕೆಜಿ ಸೇರ್ಪಡೆಗೆ 4 ವರ್ಷ ಪೂರ್ಣಗೊಳ್ಳುವುದು ಕಡ್ಡಾಯ!

ಎಲ್ ಕೆಜಿ ಸೇರ್ಪಡೆಗೆ 4 ವರ್ಷ ಪೂರ್ಣಗೊಳ್ಳುವುದು ಕಡ್ಡಾಯ!

ಉಡುಪಿ: 2024-25ರ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲಾರಂಭಿಸಿದ್ದಾರೆ. ಈ ನಡುವೆ ಎಲ್ ಕೆಜಿ ಸೇರ್ಪಡೆಗೆ 4 ವರ್ಷ ಪೂರ್ಣಗೊಂಡಿರಲೇ ಬೇಕು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದೆ. ಇದು ಕೆಲವು ಪೋಷಕರನ್ನು ಚಿಂತೆಗೀಡು ಮಾಡಿದೆ.

ಎಲ್ ಕೆಜಿ ಸೇರ್ಪಡೆಗೆ 4 ವರ್ಷ ಪೂರ್ಣಗೊಳ್ಳಲೇ ಬೇಕು ಎಂಬ ನಿಯಮ ಕಡ್ಡಾಯಗೊಳಿಸಿರುವುದರಿಂದ ಕೆಲವರು ತಮ್ಮ ಮಕ್ಕಳ ಒಂದು ವರ್ಷದ ಭವಿಷ್ಯ ಹಾಳಾಗಲಿದೆ ಎಂದು ಮಗುವಿನ ಜನ್ಮ ದಿನಾಂಕವನ್ನೇ ಬದಲಿಸಲು ಮುಂದಾಗಿದ್ದಾರೆ.

ಈಗಿನ ನಿಯಮ ಪ್ರಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 15 ವರ್ಷ ತುಂಬಬೇಕು. ಈಗ 4 ವರ್ಷ ತುಂಬಿರದ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಂಡರೆ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವಾಗ ಸಮಸ್ತೆ ಎದುರಾಗಲಿದೆ. ಹೀಗಾಗಿ ಶಾಲೆಗಳು ಈ ಬಗ್ಗೆ ಪೋಷಕರಿಗೆ ಮನದಟ್ಟು ಮಾಡುತ್ತಿವೆ. ಸರಕಾರದ ನಿಯಮವನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ತೀರ್ಪಿಗಾಗಿ ಕಾಯುತ್ತಿದ್ದಾರೆ. 4 ವರ್ಪ ಪೂರ್ಣಗೊಳ್ಳಲು 15 ದಿನ, ತಿಂಗಳು ಬಾಕಿಯಿರುವವರಿಗೆ ಈ ನಿಯಮ ಅನ್ವಯವಾದರೆ ಅವರ ಒಂದು ವರ್ಷ ವ್ಯರ್ಥವಾಗುತ್ತದೆ ಎಂಬುದು ಹೆತ್ತವರ  ಕಳಕಳಿಯಾಗಿದೆ.

RELATED ARTICLES
- Advertisment -
Google search engine

Most Popular