Sunday, July 14, 2024
Homeರಾಜ್ಯಕಸಾಯಿಖಾನೆಗೆ ಸಾಗಿಸಲು ಕೂಡಿಟ್ಟಿದ್ದ 40 ಗೋವುಗಳ ರಕ್ಷಣೆ: ಹಾಲಿನ ವಾಹನದಲ್ಲೂ ಗೋ ಸಾಗಾಟ!

ಕಸಾಯಿಖಾನೆಗೆ ಸಾಗಿಸಲು ಕೂಡಿಟ್ಟಿದ್ದ 40 ಗೋವುಗಳ ರಕ್ಷಣೆ: ಹಾಲಿನ ವಾಹನದಲ್ಲೂ ಗೋ ಸಾಗಾಟ!

ಹುಣಸೂರು: ಕಸಾಯಿಖಾನೆಗೆ ಸಾಗಿಸುವ ಉದ್ದೇಶದಿಂದ ಗೋವುಗಳನ್ನು ಕೂಡಿ ಹಾಕಿದ್ದ ಗೋಡಾನ್ ಮೇಲೆ ಪೊಲೀಸರು ದಾಳಿ ನಡೆಸಿ ಸುಮಾರು 40 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮೀಯ ಶೈಲಿಯಲ್ಲಿ ದಾಳಿ ನಡೆಸಿರುವ ಹುಣಸೂರು ಪೊಲೀಸರು ಒಂದು ಹಾಲಿನ ವ್ಯಾನ್ ಸೇರಿದಂತೆ ಮೂರು ಗೂಡ್ಸ್ ವಾಹನಗಳಲ್ಲಿ ತುಂಬಿದ್ದ ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಹುಣಸೂರಿನ ರತ್ನಪುರಿಯ ಅಲ್ತಾಫ್ ಶಾಬುದ್ದೀನ್ ಎಂಬವರಿಗೆ ಸೇರಿದ ಮನೆ ಬಳಿಯ ಗೋಡಾನ್ ನಲ್ಲಿ ಜಾನುವಾರುಗಳನ್ನು ಕೂಡಿ ಹಾಕಲಾಗಿತ್ತು. ಘಟನೆಗೆ ಸಂಬಂಧಿಸಿ ಮೂರು ಗೂಡ್ಸ್ ವಾಹನಗಳನ್ನೂ ವಶಕ್ಕೆ ಪಡೆಯಲಾಗಿದೆ.

ಹೆಚ್ಚುವರಿ ಎಸ್ಪಿ ಡಾ. ನಂದಿನಿ ಮತ್ತು ಡಿವೈಎಸ್ಪಿ ಗೋಪಾಲಕೃಷ್ಣರ ಮಾರ್ಗದರ್ಶನದಲ್ಲಿ ಹುಣಸೂರು ನಗರ ಠಾಣೆ ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್, ಎಸ್ ಐಗಳಾದ ರಾಮಚಂದ್ರ ನಾಯ್ಕ, ಅಚ್ಯುತನ್ ಮತ್ತು ಸಿಬ್ಬಂದಿ ಬುಧವಾರ ಮಧ್ಯರಾತ್ರಿ 2 ಗಂಟೆ ವೇಳೆಗೆ ದಾಳಿ ನಡೆಸಿದ್ದಾರೆ.

ಹಾಲಿನ ವಾಹನವನ್ನು ಎಲ್ಲೂ ತಪಾಸಣೆ ಮಾಡುವುದಿಲ್ಲವಾದ ಕಾರಣ, ಇಲ್ಲಿ ಗೋವುಗಳನ್ನು ಸಾಗಿಸಲು ಹಾಲಿನ ವಾಹನವನ್ನು ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.  

RELATED ARTICLES
- Advertisment -
Google search engine

Most Popular