ಪುತ್ತೂರು: ಫೇಸ್‌ಬುಕ್‌ನಲ್ಲಿ ಬಂದ ಷೇರು ಮಾರುಕಟ್ಟೆ ಹೂಡಿಕೆಯ ವಿವರಗಳನ್ನು ನಂಬಿ ವ್ಯಕ್ತಿಯೋರ್ವರು ಹಣ ಕಳೆದುಕೊಂಡ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಅವರು ಸೆನ್‌ಪೊಲೀಸ್‌ನಲ್ಲಿ ದೂರು ದಾಖಲಿದ್ದಾರೆ.
ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತಿನಲ್ಲಿ ಮೊದಲಿನಿಂದಲೂ “ಗುಡ್ ಇನ್‌ಕಂ ರಿಸಲ್ಟ್” ಎಂದು ಇದ್ದು, ಬಳಿಕ ಅದರ ಲಿಂಕ್ ಒಪನ್ ಮಾಡಿದಾಗ ವಾಟ್ಸಪ್ ಪೇಜ್ ಒಂದು ಕಾಣಿಸಿದೆ. ಈ ಪೇಜ್‌ನಲ್ಲಿ ಅಪರಿಚಿತ ವ್ಯಕ್ತಿ ಕಂಪೆನಿಯಲ್ಲಿರುವ ಸ್ಟಾಕ್‌ಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರ ಬೇರೊಂದು ವಾಟ್ಸಪ್ ಗ್ರೂಪ್‌ಗೆ ದೂರು ದಾರರನ್ನು ಸೇರಿಸಿದ್ದಾನೆ.
ಹಣ ಹೂಡಿಕೆ ಮಾಡಲು ಬೇರೊಂದು ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗುವಂತೆ ತಿಳಿಸಿ, ಅದರ ಲಿಂಕ್ ಒಪನ್ ಮಾಡಿದಾಗ ವಿಕಿಂಗ್ ಗ್ಲೋಬಲ್ ಇನ್‌ವೆಸ್ಟರ್‌ಸ್ ಎಂಬ ವಾಟ್ಸಪ್ ಗ್ರೂಪ್ ಒಂದು ಒಪನ್ ಆಗಿದೆ. ಬಳಕೆದಾರರು ಆ ಆಪ್‌ನಲ್ಲಿ ಖಾತೆಯೊಂದನ್ನು ತೆರೆದು, ತಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಬ್ಯಾಂಕ್ ವಿವರಗಳನ್ನು ನೀಡಿದ್ದಾರೆ. ನಂತರ 10,000 ರೂ. ಹಣ ಜಮೆ ಮಾಡಿದ್ದಾರೆ.
ಹೆಚ್ಚಿನ ಹಣ ಹೂಡಿಕೆ ಮಾಡಲು ದೂರು ದಾರರಿಗೆ ತಿಳಿಸಿ, ಅದಕ್ಕಾಗಿ ಮಾಡಿದ ಖಾತೆಗಳಿಗೆ ಒಟ್ಟು 46,10,000 ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹಣದ ಒಟ್ಟು ಪ್ರಾಮಾಣ ವರ್ಗಾವಣೆಯಾಗಿದೆ. ಹಣವನ್ನು ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.