Friday, February 14, 2025
Homeಬಂಟ್ವಾಳವೀರಕಂಬ ಗ್ರಾಮದ ಕೆಲಿಂಜ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 48ನೇ ವರ್ಷದ ಗಣೇಶೋತ್ಸವ

ವೀರಕಂಬ ಗ್ರಾಮದ ಕೆಲಿಂಜ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 48ನೇ ವರ್ಷದ ಗಣೇಶೋತ್ಸವ

ಹಬ್ಬ ಆಚರಣೆಗಳು ನಮ್ಮ ಮೂಲ ಸಂಸ್ಕೃತಿ ಉಳಿಸುವ ದೃಷ್ಟಿಕೋನದಲ್ಲಿ ಆಗಬೇಕು. ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿ ಹಬ್ಬ ಆಚರಣೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ನಮ್ಮ ಆಚಾರ,ಸಂಸ್ಕಾರ ಸಂಸ್ಕೃತಿಯನ್ನು ತಿಳಿವಂತೆ ಮಾಡಬೇಕು ಎಂದು ಶಿಕ್ಷಕಿ ಸಂಪನ್ಮೂಲ ವ್ಯಕ್ತಿ ರೇಣುಕಾ ಕಣಿಯೂರ್ ಹೇಳಿದರು.

ಅವರು ಶನಿವಾರ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕೆಲಿಂಜ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ ನಡೆದ 48ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂದೀಪ್ ಪೂಜಾರಿ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿಮಿತ್ತ ಮಾಡಿದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಪ್ರೀತಿಶ್ ತೊಕ್ಕೊಟ್ಟು, ಕಾರ್ತಿಕ್ ಭಂಡಾರಿ ಬೆಂಗಳೂರು, ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ದ ಅಧ್ಯಕ್ಷ ರಾಜೇಂದ್ರ ಟೈಲರ್ ನಗ್ರಿಮೊಲೆ. ಮಾಜಿ ಅಧ್ಯಕ್ಷ ದೇವದಾಸ ರೈ ಮಾಡದಾರು, ಮೊದಲಾದವರು ಉಪಸ್ಥಿತರಿದ್ದರು.

ಜಗದೀಶ್ ರೈ ನಡುವಳಚ್ಚಿಲ್ ಸ್ವಾಗತಿಸಿ, ಶ್ರೀಧರ ಗೌಡ ನಡುವಳಚ್ಚಿಲ್ ವಂದಿಸಿ, ತೀರ್ಥೇಶ್ ಮಾಡದಾರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular