ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ – ಶ್ರೀ ಮಣಿಕಂಠ ಕ್ಷೇತ್ರ ಮೂಡುಬಿದಿರೆ ಇದರ 48 ನೇ ವರ್ಷದ ದೀಪಾರಾಧನೆ,ಧಾರ್ಮಿಕ ಕಾರ್ಯಕ್ರಮ ಸಂದರ್ಭದಲ್ಲಿ , ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ಹನುಮಗಿರಿ ಮೇಳದವರಿಂದ ಜರುಗಿದ “ಸಾಕೇತ – ಸಾಮ್ರಾಜ್ಞಿ” ಯಕ್ಷಗಾನ ಬಯಲಾಟದ ಸಂದರ್ಭ ಮೇಳದ ಹಿರಿಯ ಕಲಾವಿದ “ಬಣ್ಣದ ವೇಷದಾರಿ” ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ ಇವರನ್ನು ಮೂಡುಬಿದಿರೆಯ ಕಲಾ ಪೋಷಕ ಕಲಾಭಿಮಾನಿಗಳು ಸನ್ಮಾನಿಸಿದರು.
ಯಕ್ಷಸಂಗಮದ ಶಾಂತಾರಾಮ ಕುಡ್ವರು ಸನ್ಮಾನಿತರ ಅಭಿನಂದನಾ ಭಾಷಣ ಮಾಡಿದರು ಕಲಾ ಪೋಷಕ,, ಸುಪ್ರಸಿದ್ಧ ವೃಕ್ಷೋಧ್ಯಮಿ ಪ್ರೇಮನಾಥ ಮಾರ್ಲರವರು ಮಾತನಾಡಿ ಯಕ್ಷಗಾನದಲ್ಲಿ ಸಾಧನೆಯ ಶಿಖರವನ್ನೇರಿದ ಸದಾಶಿವ ಶೆಟ್ಟಿಗಾರರನ್ನು ಕೊಂಡಾಡಿದರು.ಶ್ರೀ ಅಯ್ಯಪ್ಪ ದೇವಸ್ಥಾನದ ಪ್ರಧಾನರಾದ ಸುದರ್ಶನ್ M.,, ಪುರಸಭಾ ಉಪಾಧ್ಯಕ್ಷರಾದ ನಾಗರಾಜ ಪೂಜಾರಿ, ಉದ್ಯಮಿ ಪುನೀತ್ ಕಟ್ಟೆಮಾರ್,, ವೇದಿಕೆಯಲ್ಲಿ ಉಪಸ್ಥಿತರಿದ್ದು,, ಯಕ್ಷಮೇನಕದ ಸದಾಶಿವ ನೆಲ್ಲಿಮಾರ್ ಕಾರ್ಯಕ್ರಮ ನಿರೂಪಿಸಿದರು.