Tuesday, June 18, 2024
Homeರಾಜ್ಯಕ್ರಿಮಿನಲ್‌ಗಳಿಗೆ ಮಾಹಿತಿ ಒದಗಿಸುತ್ತಿದ್ದ ಐವರು ಪೊಲೀಸ್‌ ಸಿಬ್ಬಂದಿ ಸಸ್ಪೆಂಡ್

ಕ್ರಿಮಿನಲ್‌ಗಳಿಗೆ ಮಾಹಿತಿ ಒದಗಿಸುತ್ತಿದ್ದ ಐವರು ಪೊಲೀಸ್‌ ಸಿಬ್ಬಂದಿ ಸಸ್ಪೆಂಡ್

ತುಮಕೂರು: ಕ್ರಿಮಿನಲ್‌ಗಳಿಗೆ ಇಲಾಖೆಯ ಮಾಹಿತಿ ರವಾನಿಸುತ್ತಿದ್ದ ಐವರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತುಮಕೂರು ಎಸ್ಪಿ ಕೆ.ವಿ. ಅಶೋಕ್‌ ಈ ಅಮಾನತು ಆದೇಶ ಜಾರಿಗೊಳಿಸಿದ್ದಾರೆ.
ಕ್ಯಾತಸಂದ್ರ ಠಾಣೆಯ ಮಂಜು, ಅಹೋಬಲ ನರಸಿಂಹ ಮೂರ್ತಿ, ಜಯನಗರ ಠಾಣೆಯ ಮನು ಎಸ್.‌ ಗೌಡ, ಸಂಚಾರ ಪೊಲೀಸ್‌ ಠಾಣೆಯ ರಾಮಕೃಷ್ಣ ಮತ್ತು ಎಸ್ಪಿ ಕಚೇರಿಯ ಸುರೇಶ್‌ ಅಮಾನತುಗೊಂಡ ಪೊಲೀಸ್‌ ಸಿಬ್ಬಂದಿಯಾಗಿದ್ದಾರೆ.
ಕ್ರಿಮಿನಲ್‌ಗಳಾದ ಮಂಜುನಾಥ ರೆಡ್ಡಿ, ನವೀನ್‌, ನರಸಿಂಹಮೂರ್ತಿ ಎಂಬವರಿಗೆ ಪೊಲೀಸ್‌ ಇಲಾಖೆಯ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರೋಪಿಗಳ ವಿರುದ್ಧ ದಂಡಿನಶಿವರ ಮತ್ತು ತಿಲಕ್‌ಪಾರ್ಕ್‌ ಠಾಣೆಯಲ್ಲಿ ಕೊಲೆಗೆ ಸಂಚು, ಹಲ್ಲೆ ಆರೋಪದ ಕೇಸು ದಾಖಲಾಗಿತ್ತು. ವಾಟ್ಸಾಪ್‌ ಮೂಲಕ ಪೊಲೀಸರೇ ಆರೋಪಿಗಳಿಗೆ ಮಾಹಿತಿ ರವಾನಿಸಿದ್ದರು. ಮಂಜುನಾಥ ರೆಡ್ಡಿ ಮೊಬೈಲ್‌ ವಶಕ್ಕೆ ಪಡೆದು ಪರಿಶೀಲಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular