Saturday, July 20, 2024
Homeಅಪರಾಧಐದು ಅಸ್ತಿಪಂಜರ ಪತ್ತೆ ಪ್ರಕರಣ: ಸಾವಿಗೆ ನಿದ್ರೆ ಮಾತ್ರೆ ಕಾರಣ

ಐದು ಅಸ್ತಿಪಂಜರ ಪತ್ತೆ ಪ್ರಕರಣ: ಸಾವಿಗೆ ನಿದ್ರೆ ಮಾತ್ರೆ ಕಾರಣ

ಚಿತ್ರದುರ್ಗ: ಮನೆಯೊಂದರಲ್ಲಿ ಐದು ಅಸ್ತಿಪಂಜರಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಎಫ್ ಎಸ್ ಎಲ್ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ ನಿದ್ರೆ ಮಾತ್ರೆ ಸೇವನೆಯೇ ಕಾರಣ ಎಂಬುದು ಪತ್ತೆಯಾಗಿದೆ. ಪತ್ತೆಯಾದ ಐದು ಅಸ್ತಿಪಂಜರಗಳ ಮೂಳೆಗಳ ಪರೀಕ್ಷೆ ವೇಳೆ ನಿದ್ರೆ ಮಾತ್ರೆ ಅಂಶಗಳು ಪತ್ತೆಯಾಗಿವೆ ಎಂದು ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದಾರೆ.

ಚಿತ್ರದುರ್ಗದ ದೊಡ್ಡಸಿದ್ದವ್ವನಹಳ್ಳಿ ಮೂಲದ ನಿವೃತ್ತ ಎಂಜಿನಿಯರ್ ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ನರೇಂದ್ರ ರೆಡ್ಡಿ ಹಾಗೂ ಕೃಷ್ಣ ರೆಡ್ಡಿ ಅವರು ನಗರದ ಜೈಲು ರಸ್ತೆಯೊಂದರ ಮನೆಯಲ್ಲಿ ಮೃತಪಟ್ಟಿದ್ದರು. 2023, ಡಿ. 28ರಂದು ಅವರ ಅಸ್ತಿಪಂಜರಗಳು ಪತ್ತೆಯಾಗಿದ್ದವು. ಕೆಲವರ ದೇಹದಲ್ಲಿ ಪತ್ತೆಯಾಗಿದ್ದ ಚರ್ಮದಲ್ಲೂ ನಿದ್ರೆ ಮಾತ್ರೆಯ ಅಂಶವಿದ್ದುದು ಮರಣೋತ್ತರ ಪರೀಕ್ಷೆ ವೇಳೆಯೇ ವೈದ್ಯರು ಪತ್ತೆ ಮಾಡಿದ್ದರು.

ನಿದ್ರೆ ಮಾತ್ರೆಯ ಅಂಶಗಳನ್ನು ಉಲ್ಲೇಖಿಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಮೇಲ್ನೋಟಕ್ಕೆ ನಿದ್ರೆ ಮಾತ್ರೆ ಸೇವನೆ ವಿಚಾರ ಹೊರಬಂದಿರುವುದರಿಂದ ಈ ಸಾವಿನ ಬಗ್ಗೆ ಇದ್ದ ಹಲವು ಅನುಮಾನಗಳಿಗೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

RELATED ARTICLES
- Advertisment -
Google search engine

Most Popular